ಧರ್ಮದ ಒಳಗಡೆ ಸಿಲುಕಿದ ಮುಸ್ಲಿಂ ಮಹಿಳೆ

Authors

  • NETRAVATHI S.

Keywords:

ಸಂಪ್ರದಾಯದ ಕರಾಳತೆಯಲ್ಲಿ ಮಹಿಳೆಯರು, ಇದ್ದಾತ್ ಮತ್ತು ಮರು ವಿವಾಹ, ತಲಾಖ್ ಎಂಬ ರಾಕ್ಷಸತನದ ಅನಾವರಣ

Abstract

ಧರ್ಮ ಎಂದರೆ ಮಾನವೀಯ ಮೌಲ್ಯಗಳನ್ನು, ಅಹಿಂಸೆಯಿಂದ ಕೂಡಿರುವಂತಹದ್ದು, ಎಲ್ಲರನ್ನು ಪ್ರೀತಿಯಿಂದ, ಮಮತೆಯಿಂದ ನೋಡಿಕೊಳ್ಳುವುದನ್ನು ಧರ್ಮ ಎನ್ನಬಹುದು. ಹಾಗೆಯೇ ಯಾವುದೇ ಆಚಾರ-ವಿಚಾರಗಳನ್ನು, ಮಾನವ ಸಂಬಂಧಗಳನ್ನು ಪವಿತ್ರ ಭಾವನೆಯಿಂದ, ಯಾವುದೇ ಜೀವಿಗೂ ತೊಂದರೆಯನ್ನು ನೀಡದೆ ನಡೆಸಿಕೊಳ್ಳುವುದನ್ನು ಧರ್ಮ ಎಂದು ಹೇಳಬಹುದು. ಭಾರತ ಹಲವು ಧರ್ಮಗಳನ್ನು ಒಳಗೊಂಡಿದೆ, ಅದರಲ್ಲಿ ಮುಸ್ಲಿಂ ಧರ್ಮವೂ ಒಂದು. ಹಿಂದೂಗಳಂತೆ ಮುಸ್ಲಿಂ ಧರ್ಮದವರನ್ನು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಗುರುತಿಸಬಹುದು. ಯಾವುದೇ ಧರ್ಮದಲ್ಲಾದರೂ ಮಹಿಳೆಯರಿಗೆ ಸ್ವಾತಂತ್ರ್ಯ ದೊರೆಯುವುದು ತೀರ ಕಡಿಮೆ ಪ್ರಮಾಣದಲ್ಲಿ. ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಪ್ರಾಚೀನ ಕಾಲದಲ್ಲಿ ಗೌರವ, ಮನ್ನಣೆ, ತಮ್ಮ ಬದುಕನ್ನು ಅವರೇ ನಿರ್ಮಿಸಿಕೊಳ್ಳುವ ಅವಕಾಶ, ಸ್ವಾತಂತ್ರ್ಯ ಇತ್ತು. ಆದರೆ ಕಾಲಾನಂತರ ಎಲ್ಲವೂ ಕಣ್ಮರೆಯಾಗಿ ಮಹಿಳೆಯರು ಕೇವಲ ಪುರುಷನ ಬೇಕುಬೇಡಗಳನ್ನು ಈಡೇರಿಸುವ ಒಂದು ವಸ್ತುವಾಗಿ ಮಾರ್ಪಟ್ಟಿದ್ದನ್ನು ಕಾಣಬಹುದು. ಪ್ರಸ್ತುತ ಲೇಖನವನ್ನು ಮುಸ್ಲಿಂ ಧರ್ಮದ ಮಹಿಳೆ ಧರ್ಮದ ಹಿನ್ನೆಲೆಯಲ್ಲಿ ಅನುಭವಿಸಿದ ಸಂಕಷ್ಟಗಳನ್ನು ಮುಸ್ಲಿಂ ಲೇಖಕರು ರಚಿಸಿದ ಕತೆ, ಕಾದಂಬರಿಗಳ ಹಿನ್ನೆಲೆಯಲ್ಲಿ ಚರ್ಚಿಸಲಾಗುತ್ತದೆ.

Downloads

Published

05.04.2024

How to Cite

NETRAVATHI S. (2024). ಧರ್ಮದ ಒಳಗಡೆ ಸಿಲುಕಿದ ಮುಸ್ಲಿಂ ಮಹಿಳೆ. AKSHARASURYA, 3(05), 114 to 127. Retrieved from http://aksharasurya.com/index.php/latest/article/view/382

Issue

Section

ಪ್ರಬಂಧ. | ESSAY.