‘ಅವಳ ಪಥ’ ಒಂದು ನೋಟ
Keywords:
ಅಸ್ಮಿತೆ, ಅಧಿಕಾರಶಾಹಿ, ಸ್ತ್ರೀ ಸಂವೇದನೆ, ಚಿತ್ರಿತ ನೆಲೆ, ಸೃಷ್ಟಿತ ನೆಲೆ, ಸ್ವಾಯತ್ತತೆAbstract
ಜನಪದ ಸಾಹಿತ್ಯದಿಂದ ಇಂದಿನವರೆಗಿನ ಮಹಿಳಾ ಪಯಣವನ್ನು ಈ ಲೇಖನ ದಾಖಲಿಸುತ್ತದೆ. ಮಾತೃಪ್ರಧಾನ ಸಂಸ್ಕೃತಿಯಿಂದ, ಪಿತೃಪ್ರಧಾನ ಸಂಸ್ಕೃತಿಯವರೆಗಿನ ಚಲನೆಯನ್ನು ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಧಾರ್ಮಿಕ ನೆಲೆಯ ಹಿನ್ನೆಲೆಯಲ್ಲಿ ಶೋಧಿಸಿದೆ. ಪ್ರಸ್ತುತ ಕೃತಿಯು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸ್ತ್ರೀ ಪರ ಆಲೋಚನಾ ಕ್ರಮಗಳ ವಿಕಾಸವನ್ನು ಗುರುತಿಸುತ್ತದೆ. ಜನಪದ ಸಾಹಿತ್ಯ ಹಾಗೂ ಹಳಗನ್ನಡ ಕಾವ್ಯಗಳಿಂದ ಹಿಡಿದು ಮಹಿಳೆಯರ ಪ್ರಸ್ತುತ ಸಾಹಿತ್ಯಾಭಿವ್ಯಕ್ತಿಯನ್ನು ರೂಪಿಸುತ್ತಿರುವ ಬೌದ್ಧಿಕ ದ್ರವ್ಯ ಯಾವುದೆಂಬುದು ಇಲ್ಲಿ ಶೋಧಿತವಾಗಿದೆ. ವಚನಕಾರ್ತಿಯರ ದೇಸಿ ಮಾದರಿಯಿಂದ ತೊಡಗಿ, ಈ ಕಾಲದ ಪ್ರಮುಖ ತಾತ್ವಿಕತೆಯಾದ ಸ್ತ್ರೀವಾದಿ ಸಿದ್ಧಾಂತಗಳವರೆಗೆ ಇಲ್ಲಿನ ಚರ್ಚೆಯ ಹರಹಿದೆ. ನವೋದಯ ಸಾಹಿತ್ಯದ ಸಾಮಾಜಿಕ ಅರಿವು, ಪ್ರಗತಿಶೀಲ ಸಾಹಿತ್ಯದ ವೈಚಾರಿಕ ನಿಲುವು, ನವ್ಯದ ಅಂತರಂಗ ಜಗತ್ತಿನ ಒಳಮುಖಿ ಚಲನೆ, ದಲಿತ-ಬಂಡಾಯ ಕಾಲದಲ್ಲಾದ ರಾಜಕೀಯ ಪ್ರಜ್ಞೆಯ ವಿಕಾಸ, ಪ್ರತಿರೋಧ ಹಾಗೂ ಹಕ್ಕು ಪ್ರತಿಪಾದನೆಗಳ ಹೊಸ ಚಲನೆ, ಸ್ತ್ರೀ ಸಂವೇದನೆಯ ಸೂಕ್ಷ್ಮ ಸ್ತರಗಳ ಅರಿವುಗಳನ್ನು ಇಲ್ಲಿ ಗುರುತಿಸಲಾಗಿದ್ದು, ಮಹಿಳಾ ಕಥಾ ಸಾಹಿತ್ಯದ ಚಲನಶೀಲತೆಯನ್ನು ಸಮಗ್ರವಾಗಿ ಹಿಡಿದಿಡಲಾಗಿದೆ. ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಹೆಣ್ಣು ನಡೆಸುವ ಹೋರಾಟ, ತನ್ನತನದ ಹುಡುಕಾಟ ಈ ಲೇಖನ ಒಂದೇ ಸೂತ್ರದಲ್ಲಿ ಹಿಡಿದಿಡುತ್ತದೆ.