ಹೊಸಗನ್ನಡದ ಆರಂಭಿಕ ಕತೆಗಳು
Keywords:
ಕಾಲಘಟ್ಟ, ಆಲೋಚನ ಕ್ರಮ, ವೈಚಾರಿಕತೆ, ಕಥಾವಸ್ತು, ಭಾಷಾಂತರ, ಅಸಂಗತವಾದAbstract
ಕನ್ನಡ ಸಾಹಿತ್ಯ ಲೋಕ ಹಲವಾರು ಪ್ರಕಾರಗಳ ಮೂಲಕ ಮಹತ್ವವನ್ನು ಪಡೆದಿದೆ. ಪ್ರಸ್ತುತ ಲೇಖನವು ನವೋದಯ ಪೂರ್ವ, ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಎಲ್ಲಾ ಕಾಲಘಟ್ಟಗಳಲ್ಲಿಯೂ ಕನ್ನಡದ ಕತೆಗಾರರು ತಮ್ಮ ಕಥಾಬರವಣಿಗೆಯ ಮೂಲಕ ಕಥಾಲೋಕವನ್ನು ಹಾಗೂ ಸಾಹಿತ್ಯಲೋಕವನ್ನು ವಿಸ್ತರಿಸಿದ್ದಾರೆ. ಆದರೆ, ಹೊಸಗನ್ನಡದ ಆರಂಭಿಕ ಬರಹಗಾರರ ಕಥೆಗಳ ವಸ್ತು ಆಲೋಚನ ಕ್ರಮ ಹಾಗೂ ಉದ್ದೆಶಗಳನ್ನು ಅರ್ಥೈಸಿಕೊಳ್ಳದೆ ನಂತರದ ಕಥೆಗಳನ್ನು ಅಭ್ಯಾಸ ಮಾಡಿದರೆ ಕನ್ನಡ ಕಥಾ ಸಾಹಿತ್ಯದ ಸಂಪೂರ್ಣ ಅರಿವು ಆಗುವುದಿಲ್ಲ. ಹಾಗಾಗಿ, ಈ ಲೇಖನದಲ್ಲಿ ಪ್ರಾರಂಭದ ಕಥೆಗಾರರ ಕೆಲವು ಕಥೆಗಳ ಚರ್ಚೆಯನ್ನು ಮಾಡಲಾಗಿದೆ.