ಕನ್ನಡ ಪತ್ರಿಕೋದ್ಯಮ ಮತ್ತು ಲಂಕೇಶ್
Keywords:
ಕನ್ನಡ ಪತ್ರಿಕೋದ್ಯಮ, ಪಿ. ಲಂಕೇಶ್, ಲಂಕೇಶ್ ಪತ್ರಿಕೆ, ಟೀಕೆ-ಟಿಪ್ಪಣಿ, ಮೇಷ್ಟ್ರುAbstract
ಬೌದ್ಧಿಕ ನೇಕಾರ, ಸಂಸ್ಕೃತಿ ಚಿಂತಕ ಡಿ.ಆರ್. ನಾಗರಾಜ್ ಅವರಿಂದ ‘ಶತಮಾನದ ಪ್ರತಿಭೆ’ ಎಂದು ಕರೆಸಿಕೊಂಡ, ‘ಇಟ್ಟಿಗೆ ಪವಿತ್ರವಲ್ಲ; ಜೀವ ಪವಿತ್ರ’ ಎಂದು ಬರೆದ, ‘ನಾವು ಕೊಟ್ಟಿದ್ದಕ್ಕಿಂತ ಹೆಚ್ಚಿನ ಸ್ನೇಹ ಕೊಡುವವರು ದಲಿತರು ಮತ್ತು ಮುಸ್ಲಿಮರು’ ಎಂದು ನುಡಿದ, ನಮ್ಮ ಲೇಖಕರು, ಚಿಂತಕರು ‘ಮೇಷ್ಟ್ರು’ ಎಂದು ಅಭಿಮಾನದಿಂದ ಸ್ಮರಿಸಿಕೊಳ್ಳುವ, ಇಂದಿಗೂ ಅನೇಕ ಸೂಕ್ಷ್ಮ ಮನಸ್ಸಿನವರ ನೋಟ, ಸಂವೇದನೆ, ಪ್ರಜ್ಞೆಯಲ್ಲಿರುವ ಲಂಕೇಶರನ್ನು, ಕಣ್ಣಾರೆ ನೋಡದಿರುವ ಹೊಸ ತಲೆಮಾರಿನವರು, ಹದಿಹರೆಯದ ಜಾಣ, ಜಾಣೆಯರು ಫೇಸ್ಬುಕ್, ವಾಟ್ಸಾಪ್ ಮುಂತಾದ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅವರ ಬರಹಗಳ ತುಣುಕುಗಳ ಮೂಲಕ ಆಗಾಗ ಮನನ ಮಾಡುತ್ತಿರುವುದು- ಲಂಕೇಶರ ಅನುಪಸ್ಥಿತಿಯಲ್ಲಿ ಈ ಕಾಲವನ್ನು ನೇರ್ಪುಗೊಳಿಸುವ, ಜೀವಂತವಾಗಿ ಸಹ್ಯಗೊಳಿಸುವ, ಸ್ಪೂರ್ತಿಯನ್ನು ಚಿಮ್ಮಿಸುವ ಹಾಗೂ ಹೊಸ ಕನಸುಗಳೊಂದಿಗೆ ಬದುಕಿ ಬಾಳಬೇಕಾದವರಿಗೆ ಭರವಸೆಯಂತಿದೆ.