ಮಲ್ಲಿಕಾ ಘಂಟಿಯವರ ‘ಚಾಜ’ ನಾಟಕದಲ್ಲಿ ಸಾಂಸ್ಕೃತಿಕ ಸಂಘರ್ಷ

Authors

  • ಆರತಿ ಎಸ್. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ವಿಸ್ತರಣಾ ಕೇಂದ್ರ ದೇವದುರ್ಗ.

Keywords:

ಬಹುಪತ್ನಿತ್ವ, ವರದಕ್ಷಿಣಿ, ರಮೇಶ, ಕುಲಕರ್ಣಿ, ಚಾಜ, ದ್ವೇಷ, ಸಾಂಸ್ಕೃತಿಕ ಸಂಘರ್ಷ, ದೇಸಾಯಿ

Abstract

ಪುರಾತನ ಕಾಲದಿಂದಲೂ ಸಾಮ್ರಾಜ್ಯಶಾಹಿಗಳು, ಪುರುಷಪ್ರಧಾನತೆ ಮತ್ತು ಪುರೋಹಿತಶಾಹಿತ್ವಗಳು ಒಟ್ಟಾಗಿಯೇ ಮಹಿಳೆಯರ ಮೇಲೆ ನೂರಾರು ಕಟ್ಟುಪಾಡುಗಳನ್ನು ಹೇರಿವೆ. ಹೆಣ್ಣು ಒಂದು ವಸ್ತು ಎಂದು ಪುರುಷಪ್ರಧಾನ ವ್ಯವಸ್ಥೆಯ ಧರ್ಮವು ನಿರ್ವಹಿಸುತ್ತದೆ. ಪುರುಷನ ಅಧಿಕಾರ ಸ್ಥಾಪನೆಯ ಕಾರಣದಿಂದ ಅವನೇ ಹುಟ್ಟು ಹಾಕಿದ ಧರ್ಮ, ಕಾನೂನು, ನಿಯಮಗಳು, ಕಟ್ಟುಪಾಡುಗಳು ಹೆಣ್ಣನ್ನು ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುತ್ತವೆ. ಕುಟುಂಬ, ಆಸ್ತಿ, ಉತ್ಪಾದನೆ ಹೀಗೆ ಎಲ್ಲದರ ಮೇಲೆ ಪುರಷಾಧಿಪತ್ಯವೇ ಇರುತ್ತದೆ. ಈ ಕಾರಣದಿಂದಾಗಿ ಬಾಲ್ಯವಿವಾಹ, ಸತಿಪದ್ಧತಿ, ವಿಧವಾ ಸಮಸ್ಯೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಬಹುಪತ್ನಿತ್ವ, ವರದಕ್ಷಿಣೆ ಮುಂತಾದ ಕ್ರೂರ ಸಂಪ್ರಧಾಯಗಳಿಗೆ ಹೆಣ್ಣನ್ನು ಸಿಲುಕಿಸಿ ಅವಳನ್ನು ನಿರಂತರ ಶೋಷಣೆಗೆ ಒಳಗುಮಾಡಲಾಗಿದೆ. ಮನುಸ್ಮೃತಿ ಮೊದಲಾದ ಕೃತಿಗಳಿಂದ ಹೆಣ್ಣಿನ ಸ್ವಾತಂತ್ರ್ಯಹರಣ ಮಾಡಿ ಪುರುಷಾಧೀನಗೊಳಿಸಲಾಯಿತು. ಇದು ಹೆಣ್ಣನ್ನು ಸಮಾಜದಲ್ಲಿ ಅತ್ಯಂತ ಕನಿಷ್ಠ ಸ್ಥಾನಕ್ಕೆ ಇಳಿಸಲು ಕಾರಣವಾಯಿತು.


ಯಾವುದೇ ಒಂದು ಸಂಸ್ಕೃತಿಯು ಮನುಷ್ಯರನ್ನು ಸದ್ಗುಣಶೀಲರನ್ನಾಗಿ ಮಾಡಬೇಕು, ಅದು ಉತ್ತಮ ಸಂಸ್ಕೃತಿ. ಆದರೆ ಸಮಾಜದಲ್ಲಿ ಹಲವು ಆಚರಣೆ ಪದ್ಧತಿಗಳ ಮೂಲಕ ಜನರನ್ನು ದೌರ್ಜನ್ಯ, ತಾರತಮ್ಯಕ್ಕೆ ಒಳಗಾಗುವಂತೆ ಮಾಡುವ ಕೆಲವು ನಂಬಿಕೆಯ ಆಚರಣೆಗಳು ಹೀನವಾಗಿ ಅಸಹ್ಯವಾಗಿ ಕಂಡುಬರುತ್ತವೆ. ಈ ನಿಟ್ಟಿನಲ್ಲಿ ಮಲ್ಲಿಕಾ ಘಂಟಿಯವರ ಚಾಜ ನಾಟಕವು ಪುರುಷಪ್ರಧಾನತೆಯು ಹೆಣ್ಣನ್ನು ಸಾಂಸ್ಕೃತಿಕತೆಯ ನೆಲೆಯನ್ನು ಬಳಸಿಕೊಂಡು ಅನುಭೋಗಿಸುವ ನಡೆಯನ್ನು ಕಥಾವಸ್ತುವಾಗಿಸಿಕೊಂಡಿದೆ. ‘ಚಾಜ’ ಎಂದರೆ ‘ನಿಯಮ’ ‘ಪದ್ಧತಿ’ ಎಂದರ್ಥ. ವಿಜಾಪುರ ಜಿಲ್ಲೆಯ ತುಂಬಾ ಹಾಗೂ ಉತ್ತರ ಕರ್ನಾಟಕದ ಹೆಚ್ಚಿನ ಹಳ್ಳಿಗಳಲ್ಲಿ ಈ ಚಾಜ ಪದ ಬಳಕೆಯಲ್ಲಿದೆ. ಜಮೀನ್ದಾರಿ ವ್ಯವಸ್ಥೆಯಲ್ಲಿ ಮದುವೆ ನಂತರ ಮನೆಗೆ ಬರಬೇಕಾದ ಸೊಸೆ ಊರ ಗೌಡನ ಅಥವಾ ದೇಸಾಯಿ ಮನೆಯಲ್ಲಿ ಅವನ ತೆಕ್ಕೆಯಲ್ಲಿ ಮೊದಲ ರಾತ್ರಿ ಕಳೆಯಬೇಕಾಗಿತ್ತು. ಅದು ಒಂದು ಚಾಜ. ಹಬ್ಬ ಹರಿದಿನಗಳ ಎಲ್ಲಾ ಕ್ರಿಯೆಗಳು ದೇಸಾಯಿಗಳ ಮನೆಯಲ್ಲಿ ಅವರ ನಾಯಕತ್ವದಲ್ಲಿ ಆರಂಭವಾಗುತ್ತದೆ ಇದೆಲ್ಲ ಚಾಜ.

References

ಮಲ್ಲಿಕಾ ಘಂಟಿ. (2015). ಚಾಜ. ಗೌತಮ ಪ್ರಕಾಶನ. ಬಳ್ಳಾರಿ.

ಕರೀಗೌಡ ಬೀಚನಹಳ್ಳಿ. (2015). ಬಸವಣ್ಣ ಪುನಲೇಖ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

ಮರುಳಸಿದ್ದಪ್ಪ ಕೆ. (2013). ಆಧುನಿಕ ಕನ್ನಡ ನಾಟಕ. ಅಂಕಿತ ಪುಸ್ತಕ. ಬೆಂಗಳೂರು.

Downloads

Published

09.07.2024

How to Cite

ಆರತಿ ಎಸ್. (2024). ಮಲ್ಲಿಕಾ ಘಂಟಿಯವರ ‘ಚಾಜ’ ನಾಟಕದಲ್ಲಿ ಸಾಂಸ್ಕೃತಿಕ ಸಂಘರ್ಷ. AKSHARASURYA, 4(03), 88 to 94. Retrieved from http://aksharasurya.com/index.php/latest/article/view/368

Issue

Section

ಪುಸ್ತಕ ವಿಮರ್ಶೆ. | BOOK REVIEW.