ಮಹಿಳಾ ಪತ್ರಿಕೋದ್ಯಮಿ ಎಂ. ಆರ್. ಲಕ್ಷಮ್ಮ
Keywords:
ಮಹಿಳೆ, ಸಬಲೀಕರಣ, ವೃತ್ತಿ, ಕೌಟುಂಬಿಕ ನಿರ್ವಹಣೆ, ಸವಾಲುAbstract
ಭಾರತ ದೇಶವು ತನ್ನ ಶ್ರೀಮಂತ ಸಂಸ್ಕೃತಿ ಮೌಲ್ಯಗಳು ಹಾಗೂ ಪರಂಪರೆಗೆ ವಿಶ್ವದಲ್ಲಿಯೇ ಪ್ರಸಿದ್ಧವಾಗಿದೆ. ಭಾರತೀಯ ಮಹಿಳೆಯು ಅನಾದಿ ಕಾಲದಿಂದಲೂ ಪತ್ನಿಯಾಗಿ, ಮಗಳಾಗಿ, ತಾಯಿಯಾಗಿ, ಕುಟುಂಬದ ಪೋಷಕಿಯಾಗಿ ಹಲವಾರು ಪಾತ್ರಗಳನ್ನು ಬಹಳ ಗೌರವಯುತವಾಗಿ ನಿರ್ವಹಿಸುತ್ತಾ ಬಂದಿದ್ದಾಳೆ. ಭಾರತದ ನೆಲದಲ್ಲಿ ಮಹಿಳೆಗೆ ವಿಶೇಷವಾದ ಮಹತ್ವದ ಸ್ಥಾನ ಇದೆ. ದೇವರ ಸ್ಥಾನದಲ್ಲಿಯೂ ಪೂಜಿಸಲ್ಪಡುತ್ತಾಳೆ.
ಆದರೆ 21ನೆಯ ಶತಮಾನದಲ್ಲಿ ಜಾಗತಿಕರಣದ ಹಿನ್ನಲೆಯಲ್ಲಿ ಭಾರತೀಯ ಮಹಿಳೆಯು ಕುಟುಂಬವಷ್ಟೆ ಅಲ್ಲದೆ ಮನೆಯ ಹೊರಗಿನ ಕೆಲಸ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾಳೆ. ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿರದೆ ಆಕೆಯ ವೃತಿ ಬದುಕಿನಲ್ಲಿಯೂ ಕೂಡ ಯಶಸ್ಸನ್ನು ಕಾಣುತ್ತಿದ್ದಾಳೆ. ಕುಟುಂಬದ ಆರ್ಥಿಕ ಸ್ಥಿತಿಗಳನ್ನು ಸುಧಾರಿಸಲು ಆಕೆಯ ಕೊಡುಗೆ ಮಹತ್ವ ಪಡೆದಿದೆ. ಕೆಲವೊಮ್ಮೆ ಮಹಿಳೆಯೇ ಕುಟುಂಬದ ಮುಖ್ಯ ಅನ್ನದಾತೆಯಾಗಿರುತ್ತಾಳೆ. ಆಕೆಯ ಆದಾಯವು ಮುಖ್ಯ ಆದಾ ಯವಾಗರುತ್ತದೆ. ಜಾಗತೀಕರಣದ ನೆಲೆಗಟ್ಟಿನಲ್ಲಿ ಮಹಿಳೆಯು ಪುರುಷನೊಟ್ಟಿಗೆ ದುಡಿದರೆ ಮಾತ್ರ ಕುಟುಂಬ ಆರ್ಥಿಕವಾಗಿ ಸಬಲವಾಗಿರುತ್ತದೆ ಎಂಬ ನಂಬಿಕೆಯು ಸಮಾಜದಲ್ಲಿ ಗಟ್ಟಿಯಾಗಿದೆ.
ಆದರೆ ಕುಟುಂಬ ಹಾಗೂ ವೃತ್ತಿ ಬದುಕು ಎರಡನ್ನೂ ಸಮಾನವಾಗಿ ನಿರ್ವಹಿಸುವುದು ಆಧುನಿಕ ಭಾರತೀಯ ಮಹಿಳೆಗೆ ದೊಡ್ಡ ಸವಾಲಾಗಿದೆ. ಕುಟುಂಬ ವೃತ್ತಿ ಹಾಗೂ ಆಕೆಯ ಆರೋಗ್ಯ ಮತ್ತು ಸುಖ ಎಂದು ಬಂದಾಗ ಬಹಳಷ್ಟು ಬಾರಿ ಆಕೆ ಯಾವುದಾದರೊಂದು ತ್ಯಾಗ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಕೆಲಸ ಮಾಡುವ ಮಹಿಳೆ ಬಹಳ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಪತ್ರಿಕೆಯು ಬದಲಾದ ಕಾಲಮಾನ ಮತ್ತು ಪರಿಸ್ಥಿತಿಗಳಲ್ಲಿ ಮಹಿಳೆಯ ಕುಟುಂಬ ಹಾಗೂ ವೃತ್ತಿಯ ಸಮತೋಲನ ನಿರ್ವಹಣೆಗಿರುವ ಸವಾಲುಗಳನ್ನು ಚರ್ಚಿಸುತ್ತದೆ.