ಮಹಿಳಾ ಸಬಲೀಕರಣ ಮತ್ತು ವೈಷ್ಣವ ಧರ್ಮ
Keywords:
ವೈಷ್ಣವಧರ್ಮ, ಶ್ರೀವೈಷ್ಣವಧರ್ಮ, ರಾಮಾನುಜಾಚಾರ್ಯರು, ಮಾತೃದೇವತಾರಾಧನೆ, ಆಳ್ವಾರರು, ಮೋಕ್ಷ, ದೇವಾಲಯAbstract
ನನ್ನ ಸಂಶೋಧನಾ ಲೇಖನದಲ್ಲಿ ನಾನು “ಮಹಿಳಾ ಸಬಲೀಕರಣ ಮತ್ತು ವೈಷ್ಣವ ಧರ್ಮ” ಎಂಬ ವಿಷಯವನ್ನು ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಲು ಪ್ರಯತ್ನಿಸಿರುತ್ತೇನೆ. ಈ ದಿಕ್ಕಿನಲ್ಲಿ ವೈಷ್ಣವ ಧರ್ಮ ಮಹಿಳಾ ಸಬಲೀಕರಣಕ್ಕೆ ಯಾವ ರೀತಿಯ ಕೊಡುಗೆ ನೀಡಿದೆ? ಮಹಿಳೆಯರ ಸ್ಥಾನಮಾನದ ಸುಧಾರಣೆಗೆ ವೈಷ್ಣವ ಧರ್ಮದ ಕೊಡುಗೆ ಏನು? ಎಂಬ ನಿಟ್ಟಿನಲ್ಲಿ ಈ ಕಿರು ಪ್ರಬಂಧವನ್ನು ಸಿದ್ಧಪಡಿಸಿರುತ್ತೇನೆ. ಭಾರತದ ದೇಶದಲ್ಲಿ ಮಹಿಳೆಗೆ ಮಹತ್ವದ ಸ್ಥಾನವಿದೆ ಅಲ್ಲದೆ ಸಾಂಸ್ಕೃತಿಕವಾಗಿ ಮಹಿಳೆಯ ಸ್ಥಾನಮಾನ ಮಹತ್ವಪೂರ್ಣವಾಗಿದೆ. “ಯತ್ರ ನಾರ್ಯಂತು ಪೂಜ್ಯಂತೆ ರಮಂತೆ ತತ್ರ ದೇವತಾ” [ಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ] ಎಂದು ನಮ್ಮ ಪುರಾಣಗಳಲ್ಲಿ ಘೋಷಿಸಿವೆ. ಮಹಿಳೆ ಪುರುಷನಿಗೆ ಆಧಾರ ಸ್ಥಂಭದಂತಿದ್ದಳು. ಪುರುಷನ ಸರ್ವತೋಮುಖ ಅಭಿವೃದ್ಧಿಯಲ್ಲಿ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಾಳೆ. ಹಾಗಾಗಿ ಮಹಿಳೆಯರಿಗೆ ವೈಷ್ಣವ ಧರ್ಮ ಯಾವ ರೀತಿಯ ಸವಲತ್ತುಗಳನ್ನು ನೀಡಿದೆ ಎಂಬ ವಿಷಯವನ್ನು ಕುರಿತು ಇಲ್ಲಿ ವಿಶ್ಲೇಷಿಸಿರುತ್ತೇನೆ.