ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರು: ಯಶೋಧರಮ್ಮ ದಾಸಪ್ಪ
Keywords:
ರಚನಾತ್ಮಕ ಸಿದ್ಧಾಂತ, ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ, ಸ್ವಯಂ ಉದ್ಯೋಗ, ಮಹಿಳೆಯರ ಸಬಲೀಕರಣ, ಮದ್ಯಪಾನ ನಿಷೇಧ ಕಾನೂನುAbstract
1857ರ ಮಹಾಕ್ರಾಂತಿಯ ನಂತರ ಭಾರತ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯೊಂದಿಗೆ ದೇಶದ ಸ್ವಾತಂತ್ರ್ಯ ಹೋರಾಟ ವಿಧಾನವು ವೇಗಪಡೆದುಕೊಂಡಿತು, ಅದರಲ್ಲೂ ಗಾಂಧೀಜಿಯವರ ಅಹಿಂಸಾತ್ಮಕ ಯುಗದಲ್ಲಿ ಸ್ವಾತಂತ್ರ್ಯ ಹೋರಾಟವಂತು ದೇಶದ ಮೂಲೆ-ಮೂಲೆಗೂ ಪಸರಿಸಿ, ದೇಶದಲ್ಲಿನ ರೈತರು, ಕಾರ್ಮಿಕರು, ವಿಧ್ಯಾರ್ಥಿಗಳು, ಮಧ್ಯಮ ವರ್ಗದವರು, ಮಹಿಳೆಯರು ಮುಂತಾದ ಎಲ್ಲಾ ವರ್ಗದ ಜನರು ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು. ಈ ಕಾಲಾವಧಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಜ್ವಾಲೆಯಾಗಿ ಹೊರಹೊಮ್ಮಿತು. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಪುರುಷರೊಂದಿಗೆ ಸ್ತ್ರೀಯರು ಸಹಾ ಸರಿಸಮಾನವಾಗಿ ಭಾಗವಹಿಸಿ, ಅಪಾರ ತ್ಯಾಗ ಮತ್ತು ಕಷ್ಟಸಹಿಷ್ಣುತೆಯೊಂದಿಗೆ ಸ್ವಾತಂತ್ರ್ಯ ಸಾಧನೆಯಲ್ಲಿ ಪುರುಷರೊಂದಿಗೆ ಸಮಾನ ಪಾತ್ರವಹಿಸಿ ವಿಜೃಂಬಿಸಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರು ಅನೇಕರಿದ್ದಾರೆ.
ಪ್ರಸ್ತುತ ಈ ಲೇಖನದಲ್ಲಿ ಕನ್ನಡ ನಾಡಿನಲ್ಲಿ ಬ್ರಿಟೀಷರ ಹೋರಾಟ ನೆಡೆಸಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಯಶೋಧರಮ್ಮ ದಾಸಪ್ಪರವರು ಗಾಂಧೀಜಿಯವರ ರಚನಾತ್ಮಕ ಸಿದ್ಧಾಂತಗಳಿಂದ ಪ್ರೇರಣೆಗೊಂಡು, ಸಮಾಜ ಸೇವಕಿಯಾಗಿ, ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಶೋಷಿತ ಮಹಿಳಾ ವರ್ಗದ ದ್ವನಿಯಾಗಿ, ಬಡವರ ಉನ್ನತಿಗಾಗಿ, ಮೈಸೂರು ಸಂಸ್ಥಾನದ ಜವಾಬ್ದಾರಿ ಸರ್ಕಾರದ ಸ್ಥಾಪನೆಗಾಗಿ ನೆಡೆದ ಹೋರಾಟದಲ್ಲಿ ತೊಡಗಿ, ರಾಜ್ಯದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ತಮ್ಮ ಹೆಗ್ಗುರುತು ನೀಡಿ, ಉತ್ತಮ ಸಮಾಜ ಸೇವಕಿ ಮತ್ತು ರಾಜಕಾರಿಣಿಯಾಗಿ ತಮ್ಮನ್ನು ಸಂಪೂರ್ಣ ಸಮರ್ಪಣಾಭಾವದಿಂದ ತೊಡಗಿಸಿಕೊಂಡು ಕಾರ್ಯನಿರ್ವಹಿಸಿದ ಮಹಾನ್ ನಾಯಕಿಯಾಗಿದ್ದಾರೆ. ಎಸ್ ನಿಜಲಿಂಗಪ್ಪ ಸರಕಾರ ಜಾರಿಗೆ ತಂದ ಮದ್ಯಪಾನ ನಿಷೇಧ ಕಾನೂನು ರದ್ಧತಿಯಿಂದಾಗಿ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟಿಸಿ ತಮ್ಮ ಸಚಿವೆ ಪದವಿಗೆ ರಾಜಿನಾಮೆ ನೀಡಿ ರಾಜಕೀಯದಿಂದ ಹೊರಬಂದು ಸಮಾಜಸೇವೆ, ಮಕ್ಕಳ ಶಿಕ್ಷಣ, ಸ್ವಯಂ ಉದ್ಯೋಗ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕಿಯಾಗಿ ಕೈಗೊಂಡ ಕಾರ್ಯಗಳ ಬಗ್ಗೆ ಗಮನಹರಿಸಲಾಗಿದೆ.