ರಾಜಾರಾವ್ ಅವರ ಕಾಂತಾಪುರ: ಒಂದು ಅಧ್ಯಯನ

Authors

  • DINESH K. S.

Keywords:

ರಾಜಾರಾವ್, ಸ್ವಾತಂತ್ರ್ಯ ಹೋರಾಟ, ಗಾಂಧೀಜಿ, ಗ್ರಾಮಭಾರತ, ಭಾರತೀಯ ಇಂಗ್ಲಿಷ್ ಸಾಹಿತ್ಯ, ರಾಷ್ಟ್ರೀಯತೆ

Abstract

ರಾಜಾರಾವ್ ಅವರ ಕಾಂತಪುರ ಕಾದಂಬರಿಯು ವಸಾಹತು ಕಾಲದ ಗ್ರಾಮಭಾರತವನ್ನು ಚಿತ್ರಿಸುವ ಒಂದು ವಿಶಿಷ್ಟ ಕೃತಿಯಾಗಿದ್ದು, ಶತ ಶತಮಾನಗಳಿಂದ ಮಲಗಿದ್ದ ಭಾರತದ ಹಳ್ಳಿಗಳು ಸ್ವಾತಾಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾತ್ಮಕ, ಅಸಹಕಾರ ಚಳವಳಿಯಿಂದಾಗಿ ಇದ್ದಕ್ಕಿದ್ದಂತೆ ಹೇಗೆ ಜೀವ ತಳೆದು ಸ್ವಾತಂತ್ರ್ಯಹೋರಾಟದಲ್ಲಿ ಪಾಲ್ಗೊಂಡವು ಎಂಬುದನ್ನು ವಿವರಿಸುತ್ತದೆ. 1919 ರಿಂದ 1930 ರವರೆಗಿನ ದಿನಗಳಲ್ಲಿ ಭಾರತದಾದ್ಯಂತ, ಲಕ್ಷಗಟ್ಟಲೆ ಭಾರತೀಯ ಹಳ್ಳಿಗಳಲ್ಲಿ ಗಾಂಧಿಯವರು ತಮ್ಮ ಒಂದೇ ಜೀವಿತಾವಧಿಯಲ್ಲಿ ಇಡೀ ರಾಷ್ಟ್ರದ ಜನತೆಯನ್ನು ಶಿಸ್ತಿನ ಮತ್ತು ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟಗಾರರ ಸೈನ್ಯವನ್ನಾಗಿ ಪರಿವರ್ತಿಸಿದ ಬಗೆಯನ್ನು ಕಾದಂಬರಿ ವಾಸ್ತವಿಕ ಹಿನ್ನೆಲೆಯಲ್ಲಿ ಚಿತ್ರಿಸುತ್ತದೆ. ಗಾಂಧೀಜಿಯವರ ಚಳವಳಿಯಲ್ಲಿ ಹೆಣೆದುಕೊಂಡಿದ್ದ ಮೂರು ಮುಖ್ಯ ಅಂಶಗಳಾದ ಭಾರತೀಯರನ್ನು ರಾಜಕೀಯವಾಗಿ, ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ (ಆರ್ಥಿಕತೆಯೂ ಸೇರಿದಂತೆ) ಪುನರುತ್ಥಾನಗೊಳಿಸಬೇಕೆಂಬ ತೀರ್ಮಾನವನ್ನು ಈ ಸಂಕೀರ್ಣ ಕಥೆಯಲ್ಲಿ ಬೇರ್ಪಡಿಸಲಾಗದಂತೆ ಹೆಣೆಯಲಾಗಿದೆ. ಆದ್ದರಿಂದ ಇದು ಕೇವಲ ರಾಜಕೀಯ ಕಾದಂಬರಿ ಮಾತ್ರವಲ್ಲ, ರಾಜಕೀಯ ಸ್ವಾತಂತ್ರ್ಯದ ಹೋರಾಟದಂತೆಯೇ ಜನರ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಪರಿವರ್ತನೆಗಳಿಗೆ ಸಂಬಂಧಿಸಿದ ವಿಚಾರಗಳನ್ನೂ ಈ ಕಾದಂಬರಿ ಪ್ರಸ್ತಾಪಿಸುತ್ತದೆ. ಜೊತೆಗೆ ಹಳ್ಳಿಗಳ ದೇಶವಾದ ಭಾರತದ ಮೂಲೆ ಮೂಲೆಗಳಲ್ಲಿ ರಾಷ್ಟ್ರೀಯತೆ ಹೇಗೆ ರೂಪುಗೊಂಡಿದೆ, ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೇಗೆ ವ್ಯಾಪಿಸಿದೆ ಎಂಬುದನ್ನು ಇಂಗ್ಲಿಷ್ ಬಲ್ಲ ಆಧುನಿಕ ಜಗತ್ತಿಗೆ ಬಹಳ ಅಥೆಂಟಿಕ್ ಆಗಿ ತೋರಿಸಿದ, “ಭಾರತದಿಂದ ಬಂದ ಅತ್ಯುತ್ತಮ ಕಾದಂಬರಿ” ಎಂದು ಇ ಎಮ್ ಫಾರ್ಸ್ಟರ್ ಅವರಿಂದ ಹೊಗಳಿಸಿಕೊಂಡ, ಭಾರತೀಯ ಆಂಗ್ಲ ಸಾಹಿತ್ಯದ ಪ್ರಾತಿನಿಧಿಕ ಕಾದಂಬರಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಈ ಮಹತ್ವದ ಕೃತಿಯಲ್ಲಿ ಮೇಳೈಸಿರುವ ಗಾಂಧಿ ಚಿಂತನೆಗಳನ್ನು ಅವಲೋಕಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.

Downloads

Published

01.04.2024

How to Cite

DINESH K. S. (2024). ರಾಜಾರಾವ್ ಅವರ ಕಾಂತಾಪುರ: ಒಂದು ಅಧ್ಯಯನ. AKSHARASURYA, 3(04), 115 to 125. Retrieved from http://aksharasurya.com/index.php/latest/article/view/350