ತಿರುಕ ಅವರ ಜೀವನ ಮತ್ತು ಸಾಹಿತ್ಯ: ಒಂದು ಪಕ್ಷಿನೋಟ

Authors

  • M. MAHADEVA PRABHU

Keywords:

ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ, ತಿರುಕ, ಅನಾಥಸೇವಾಶ್ರಮ, ಶಿಕ್ಷಣ, ಸಮಾಜಸೇವೆ, ಬರಹಗಾರರು, ಸೃಜನಶೀಲ

Abstract

ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ಮೂಲತಃ ವ್ಯಾಯಾಮ ಶಿಕ್ಷಕರು, ಅವರು ತಿರುಕ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ವಲಯದಲ್ಲಿ ಪ್ರಸಿದ್ಧರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯಲ್ಲಿ ಶಿಕ್ಷಣ, ವೈದ್ಯಕೀಯ, ವ್ಯಾಯಾಮ, ಗ್ರಂಥಾಲಯ, ವಾಚನಾಲಯ, ವಿದ್ಯಾರ್ಥಿ ನಿಲಯಗಳಿಂದ ಕೂಡಿದ ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸುತ್ತಮುತ್ತಲ ಹಳ್ಳಿಗಳ ವಿದ್ಯಾರ್ಥಿಗಳಿಗೆ ವಿದ್ಯಾದೀಪಕರಾಗಿದ್ದಾರೆ. ಆಯುರ್ವೇದ, ಯೋಗ ಮತ್ತು ಸಾಹಿತ್ಯವಲಯದ ವಿದ್ವಾಂಸರನ್ನು ಮಲ್ಲಾಡಿ ಹಳ್ಳಿಗೆ ಕರೆಸಿ ವಿದ್ಯಾರ್ಥಿಳಿಗೆ ಉಪನ್ಯಾಸಗಳನ್ನು ಕೊಡಿಸುವುದಲ್ಲದೆ, ಜನರಿಗೆ ಹರಿಕಥೆ, ಕೀರ್ತನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಸಿದ್ಧರಾಗಿರುವರು. ಶ್ರೀಯುತರು 53 ಕೃತಿಗಳನ್ನು ಬರೆದಿದ್ದರೂ ಕೂಡ ಆಧುನಿಕ ಜನಮಾನಸಕ್ಕೆ ಅಪರಿಚಿತರಾಗಿದ್ಧಾರೆ. ಕಾವ್ಯ, ಕಾದಂಬರಿ, ಕಥೆ, ನಾಟಕ, ಕೀರ್ತನೆ ಮುಂತಾದ ಸೃಜನ ಕೃತಿಗಳ ಜೊತೆಯಲ್ಲಿ ಯೋಗ, ವ್ಯಾಯಾಮ, ಅಂಗಮರ್ದನ ಮುಂತಾಗಿ ಅನೇಕ ಶಾಸ್ತ್ರವಿಷಯ ಗ್ರಂಥಗಳನ್ನೂ ರಚಿಸಿದ್ದಾರೆ. ಶ್ರೀಯುತರು ಸರಳರೂ, ಸಜ್ಜನರೂ, ಸಮಾಜ ಸೇವಕರೂ ಆಗಿದ್ದಾರೆ. ತ. ಸು ಶಾಮರಾಯರ ಸಂಪಾದಕತ್ವದಲ್ಲಿ ನಂದನವನ ಎಂಬ ಅಭಿನಂದನ ಗ್ರಂಥವನ್ನು ತಿರುಕರಿಗೆ ಅರ್ಪಿಸಲಾಗಿದೆ. ಅವರ ಜೀವನ ಮತ್ತು ಸಾಹಿತ್ಯ ಕೃತಿಗಳನ್ನು ಸ್ಥೂಲ ನೋಟದಲ್ಲಿ ಪರಿಚಯಿಸುವುದು ಈ ಲೇಖನದ ಉದ್ದೇಶವಾಗಿದೆ.

Downloads

Published

01.04.2024

How to Cite

M. MAHADEVA PRABHU. (2024). ತಿರುಕ ಅವರ ಜೀವನ ಮತ್ತು ಸಾಹಿತ್ಯ: ಒಂದು ಪಕ್ಷಿನೋಟ. AKSHARASURYA, 3(04), 106 to 114. Retrieved from http://aksharasurya.com/index.php/latest/article/view/349