ಮಿಡಿಗೇಶಿಯ ಇತಿಹಾಸ ರಚನೆಯಲ್ಲಿ ಮಹಿಳೆಯರ ಪಾತ್ರ
Keywords:
ಮಿಡಿಗೇಶಿ, ಫ್ರಾನ್ಸಿಸ್ ಬುಕಾನನ್, ನಾಗಿರೆಡ್ಡಿ, ಪಾಳೆಗಾರರು, ರಾಣಿ ಅಜ್ಜಮ್ಮ, ಮಹಾನಾಡಪ್ರಭುಗಳು, ಇಮ್ಮಡಿ ಚಿಕ್ಕಪ್ಪಗೌಡAbstract
ಮಿಡಿಗೇಶಿಯ ಇತಿಹಾಸವನ್ನು ಸಮಗ್ರವಾಗಿ ನೋಡಿದಾಗ ಮಿಡಿಗೇಶಿಯು ಹಲವು ಪಾಳೆಪಟ್ಟುಗಳ ಆಡಳಿತಕ್ಕೆ ಒಳಪಟ್ಟಿರುವುದನ್ನು ಕಾಣಬಹುದಾಗಿದೆ. ಇಂತಹ ಮಿಡಿಗೇಶಿಯ ಇತಿಹಾಸವನ್ನು ಸಂಶೋಧನಾ ವಿಷಯವನ್ನಾಗಿ ನೋಡಿದಾಗ ಇದಕ್ಕೆ ಮಿಡಿಗೇಶಿ ಎಂದು ಹೆಸರು ಬರಲು ಪ್ರಮುಖ ಕಾರಣ ಒರ್ವ ಮಹಿಳೆ ಎಂದು ಅನೇಕ ದಾಖಲೆಗಳಲ್ಲಿ ಪ್ರಕಟವಾಗಿರುವುದನ್ನು ಕಾಣಬಹುದಾಗಿದೆ. ಈ ದಾಖಲೆಗಳ ಅನುಸಾರ ಮಿಡಿಗೇಶಿ ಎಂಬ ಹೆಸರಿನ ಐತಿಹ್ಯ. ಆಕೆಯ ಜೊತೆಗಿನ ಸಂಭಾಷಣೆಯು ಯುದ್ಧಕ್ಕೆ ಕಾರಣವಾಗಿ ಸಂಸ್ಥಾಪಕನ ಸಾವದ ಬಗೆಗಿನ ವಿವರಣೆಯನ್ನು ಗಮನಿಸಬಹುದಾಗಿದೆ. ಮಿಡಿಗೇಶಿ ಬೆಟ್ಟದ ಮೇಲಿರುವ ಬೃಹತ್ ಬಂಡೆಯ ಮೇಲೆ ಕೆತ್ತಲಾಗಿರುವ ಹೆಣ್ಣಿನ ಮೂರ್ತಿಯು ಸತಿಸಹಗಮನ ಮಾಡಿದ ಬಗೆಗಿನ ಉಲ್ಲೇಖಗಳನ್ನು ಐತಿಹ್ಯಗಳನ್ನು ಗಮನಿಸಬಹುದಾಗಿದೆ.
ಪಾಳೇಗಾರರ ಆಡಳಿತದಲ್ಲಿ ಮಹಿಳೆಯ ಪಾತ್ರ. ಅವರಿಗಿದ್ದ ಸ್ಥಾನಮಾನಗಳು, ಅಧಿಕಾರಗಳು ಅವರ ಕಾಲದಲ್ಲಿ ನಡೆದ ಘಟನೆಗಳ ಪುನರ್ ಅವಲೋಕನ ಮತ್ತು ವಿಮರ್ಶೆಗೆ ಒಳಪಡಿಸಬೇಕಾಗಿದೆ. ಶಾಸನಗಳಲ್ಲಿ ಮಹಿಳೆಯರು, ಮಾಸ್ತಿಕಲ್ಲುಗಳು ಅಂದಿನ ಕಾಲದ ಮಹಿಳೆಯರ ಜನಜೀವನದ ಬಗ್ಗೆ ಅರಿತಕೊಳ್ಳಲು ಮಿಡಿಗೇಶಿಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಧ್ಯಯನ ಮಾಡಲು ಸಹಕಾರಿಯಾಗಿದೆ. ದೇವಸ್ಥಾನದ ಆವರಣದಲ್ಲಿ ಮಹಿಳೆ ಬೆಂಕಿಗಾಹುತಿಯಾದ ಬಗ್ಗೆ ಶಾಸನವಿದ್ದು ಅದರ ಬಗೆಗಿನ ವಿವರಣೆ ಕಾಣಬಹುದಾಗಿದೆ. ಸುಮಾರು 8 ಶತಮಾನಗಳ ಅವಧಿಯಲ್ಲಿ ಪಾಳೆಗಾರರು ಮೈಸೂರು ಸಂಸ್ಥಾನದೊಂದಿಗಿನ ಸಂಬಂಧ ವಿವರಿಸುವದು, ವಿವಿಧ ವಿದೇಶಿ ಪ್ರವಾಸಿಗರ ಕೈಫಿಯತ್ಗಳ ದಾಖಲೆಗಳನ್ನು ಪರಿಶೀಲಿಸಿ ಅಧ್ಯಯನ ಮಾಡುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ.