ತುಮಕೂರು ಜಿಲ್ಲೆಯ ಕಾಂಗ್ರೆಸ್ಸೇತರ ರಾಜಕಾರಣದಲ್ಲಿ ಸಮಾಜವಾದಿ ಚಿಂತನೆಗಳ ಪ್ರಭಾವ
Keywords:
ಸಮಾಜವಾದ, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ, ಸಾರ್ವಭೌಮತ್ವ, ಸಾಮಾಜಿಕ ನ್ಯಾಯAbstract
ಭಾರತದ ಇತಿಹಾಸದ ಪುಟಗಳನ್ನು ಒಮ್ಮೆ ಪರಿಶೀಲಿಸಿದಾಗ ನಮಗೆ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪಾತ್ರವು ಬಹಳ ಮುಖ್ಯವಾದುದಾಗಿದೆ. ಕಾಂಗ್ರೆಸ್ ಎಂಬ ರಾಜಕೀಯ ಸಂಸ್ಥೆಯು ಭಾರತದ ಸ್ವತಂತ್ರ ಹೋರಾಟದಲ್ಲಿ ಒಂದು ಬಹುಮುಖ್ಯ ಅಂಗವಾಗಿ ಪಾತ್ರ ನಿರ್ವಹಿಸಿತ್ತು. ಕಾಂಗ್ರೆಸ್ ಸ್ವತಂತ್ರ ನಂತರ ಒಂದು ರಾಜಕೀಯ ಪಕ್ಷವಾಗಿ ಮುಂದುವರೆದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವನ್ನು ಪಡೆದುಕೊಂಡಿತ್ತು. ಆರಂಭದ ಸುಮಾರು 40 ವರ್ಷಗಳ ಕಾಲ ಭಾರತದ ರಾಜಕೀಯ ಇತಿಹಾಸವನ್ನು ಕಾಂಗ್ರೆಸ್ ಆವರಿಸಿತ್ತು. ಕರ್ನಾಟಕದ ರಾಜಕೀಯದಲ್ಲೂ ಸಹ ಕಾಂಗ್ರೆಸ್ ತನ್ನದೇ ಪ್ರಭಾವವನ್ನು ಬೀರಿತ್ತು. ಕಾಲಕ್ರಮೇಣ ಕಾಂಗ್ರೆಸ್ಸೇತರ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಕೆಲವು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವು. ಅಂತಹ ರಾಷ್ಟ್ರೀಯ ಪಕ್ಷಗಳಲ್ಲಿ ಜನತಾ ಪಕ್ಷ, ಕಮ್ಯುನಿಷ್ಟ್ ಪಕ್ಷ, ಸಮಾಜವಾದಿ ಪಕ್ಷಗಳು ಪ್ರಮುಖವಾಗಿದ್ದವು. ಕಾಂಗ್ರೆಸ್ ಪಕ್ಷದ ಸೌರ್ವಭೌಮತ್ವವನ್ನು ಪ್ರಶ್ನಿಸಿ ಪ್ರಬಲವಾದ ವಿರೋಧಿ ಬಣವು ಅಸ್ತಿತ್ವಕ್ಕೆ ಬಂದಿತ್ತು. ಇದರಲ್ಲಿ ಸಮಾಜವಾದಿ ಚಿಂತನೆಗಳು ಮತ್ತು ಚಿಂತಕರು ಅಗಾಧವಾದ ಪ್ರಭಾವವನ್ನು ಬೀರಿದರು. ಇಂತಹ ಹಿನ್ನೆಲೆ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ಸೇತರ ರಾಜಕಾರಣದ ಹುಟ್ಟು, ಬೆಳವಣಿಗೆಯಲ್ಲಿ ಸಮಾಜವಾದಿ ಚಿಂತನೆಗಳ ಪಾತ್ರವನ್ನು ನಿರೂಪಿಸುವುದು ಈ ಲೇಖನದ ಆಶಯವಾಗಿದೆ.