ಚಾರಿತ್ರಿಕ ಹಿನ್ನೆಲೆಯಲ್ಲಿ ಪ್ರಭುತ್ವ: ಕರ್ನಾಟಕ ಮತ್ತು ಕನ್ನಡ ಭಾಷೆ
Keywords:
ಅರಿಸ್ಟಾಟಲ್, ಎಮ್ಮೆಮಾಳ, ಎರುಮೆನಾಡು, Evolutionary, Force Theory, Divine Right Theory, Social Contract theoryAbstract
ಭಾಷೆ ಮತ್ತು ಸಂಸ್ಕೃತಿ ಅಂತಃಸಂಬಂಧಿತವಾಗಿ ಏರ್ಪಟ್ಟ ರೂಪಕತೆಯಾಗಿದೆ. ಒಂದು ಪ್ರಾದೇಶಿಕ ಸಂಸ್ಕೃತಿ ರೂಪಿತವಾಗಲು ಅಲ್ಲಿಯ ಭಾಷೆಯೇ ಬಹುಮುಖ್ಯವಾದ ಅಂಶವಾಗಿರತ್ತದೆ. ಭಾಷೆ ಇರದೇ ಜಗತ್ತಿನ ಯಾವ ವ್ಯಾಪರವೂ ಇಲ್ಲ. ಜಗತ್ತಿನ ಚರಿತ್ರೆಯನ್ನು ಗಮನಿಸಿದರೆ ನಮಗೆ ವೇದ್ಯವಾಗುವ ಸತ್ಯ ಒಂದಿದೆ. ಯಾವ ಭಾಷೆಯು ಶ್ರೇಷ್ಠವಲ್ಲ, ಅದೇ ರೀತಿ ಯಾವ ಭಾಷೆಯೂ ಕನಿಷ್ಠವೂ ಅಲ್ಲ. ಜಗತ್ತಿನ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವ ರೂಪಿತವಾಗಬೇಕಾದರೆ ಅದು ಕೇವಲ ಸಾಮಾಜಿಕ ಸಂಬಂಧಗಳಿಂದ, ರಾಜಕೀಯ ಪ್ರಭುತ್ವದಿಂದ ಮತ್ತು ಧಾರ್ಮಿಕ ಶ್ರೇಷ್ಠತೆಯ ಅಮಲಿನಿಂದ ಮಾತ್ರ ಆ ಪರಿಸ್ಥಿತಿ ನಿರ್ಮಾಣವಾಗಲು ಸಾಧ್ಯ. ಭಾಷೆಗಳನ್ನು ಆಡುವ ಸಮುದಾಯಗಳು ಚರಿತ್ರೆಯಲ್ಲಿ ಅನುಭವಿಸಿದ ಏರುಪೇರುಗಳು ಆಯಾ ಭಾಷೆಗಳ ಮೇಲೂ ಪರಿಣಾಮ ಬೀರಿರುತ್ತವೆ. ಪ್ರಬಲ ಪ್ರಭುತ್ವ ಅಧಿಕಾರವುಳ್ಳ ಸಮುದಾಯದ ಭಾಷೆಗೆ ಮೊದಲ ಮನ್ನಣೆ, ರಾಜ ಗೌರವ, ಪ್ರಾಶಸ್ತ್ಯ, ಅಧಿಕಾರದ ಆಡಳಿತದ ಧ್ವನಿಯಾಗುತ್ತದೆ. ಹತ್ತು ಹಲವು ಬಗೆಗಳಲ್ಲಿ ಆ ಸಂಸ್ಕೃತಿ ಮತ್ತು ಭಾಷೆ ಹೆಚ್ಚಾಗಿ ಬಳಕೆಗೆ ರೂಢಿಗೆ ಬರುತ್ತದೆ. ಅಧಿಕಾರದೊಂದಿಗೆ ಪ್ರಭುತ್ವದ ಪತನ ಅಥವಾ ಅಧಿಕಾರ ಹಸ್ತಾಂತರವಾದಗ ಅದು ಬೇರೊಂದು ಭಾಷೆಗೆ ವರ್ಗಾವಣೆಗೊಳ್ಳುವುದು. ಸಂಸ್ಕೃತ, ಗ್ರೀಕ್, ಲ್ಯಾಟಿನ್, ಪರ್ಸೋ, ಅರಾಬಿಕ್ ಮತ್ತು ಇಂಗ್ಲೀಷ್ ಭಾಷೆಗಳು ಜಗತ್ತಿನ ಚರಿತ್ರೆಯಲ್ಲಿ ಪಡೆದ ಮನ್ನಣೆಯನ್ನು ಗಮನಿಸಿದರೆ, ಪ್ರಭುತ್ವದ ಬಲ ಮತ್ತು ಭಾಷೆಯ ಶ್ರೇಷ್ಠತೆಯ ಮನ್ನಣೆ ಹೇಗೆ ಲಭಿಸಿವೆ ಎಂಬ ಸಂದರ್ಭಗಳೂ ನಮಗೆ ಗೋಚರವಾಗುತ್ತವೆ. ಆಯಾ ಭಾಷೆಗಳ ಚಾರಿತ್ರಿಕ ಬೆಳವಣಿಗೆಯಲ್ಲಿ ಹೇಗೆ ಮನ್ನಣೆ ಪಡೆದು ಮುನ್ನೆಲೆಗೆ ಬಂದಿರುವುದಕ್ಕೆ ಅದರ ಅಂತರ್ಗತ ಲಕ್ಷಣಗಳಷ್ಟೇ ಕಾರಣವಲ್ಲ. ಪ್ರಭುತ್ವದ ಚಾರಿತ್ರಿಕ ಯಜಮಾನಿಕೆಯೇ ಮೊದಲ ಪ್ರಬಲ ಬಲವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಭಾಷೆಯ ಜೊತೆಗಿನ ಸಂಸ್ಕೃತಿ ಮತ್ತು ಚರಿತ್ರೆಯ ಜೊತೆಗಿನ ಪ್ರಭುತ್ವನ್ನು ಪ್ರಮುಖ ಅಂಶವಾಗಿ ಎಲ್ಲಾ ಸಂಶೋಧನೆಗಳು ಪರಿಗಣಿಸಲಾಗಿದೆ.