ಟಿಪ್ಪು: ಐತಿಹಾಸಿಕ ವ್ಯಕ್ತಿ ಕುರಿತು ಒಂದು ಅವಲೋಕನ
Keywords:
ಹೈದರಾಲಿ, ಟಿಪ್ಪು, ಇಸ್ಟ್ಇಂಡಿಯ ಕಂಪನಿ, ರಹಮತ್ ತರೀಕೆರೆ, ಲಾರ್ಡ್ ಕಾರ್ನ್ವಾಲಿಸ್Abstract
ಭಾರತವು ರಾಜ ಮಹಾ ರಾಜರಿಂದ ಅನುಭವಿಸಿದ ಪ್ರಭುತ್ವದ ಕಲ್ಪನೆ, ಬ್ರಿಟೀಷರಿಂದ ಕಲಿತ ಪ್ರಭುತ್ವದ ಪಾಠ, ಸ್ವಾತಂತ್ರ್ಯ ನಂತರ ನಾವು ಅನುಭವಿಸುತ್ತಿರುವ ಪ್ರಜಾಪ್ರಭುತ್ವದ ಕಲ್ಪನೆಗಳಲ್ಲಿ ಬಹಳ ವೈರುಧ್ಯ ಮತ್ತು ವ್ಯತ್ಯಾಸಗಳು ಇವೆ. ಪ್ರಜಾಪ್ರಭುತ್ವದ ದೃಷ್ಟಿಯಿಂದ ಇತಿಹಾಸವನ್ನು ನೋಡಿದರೆ ಬ್ರಿಟೀಷರು, ಇಲ್ಲಿಯ ರಾಜ ಮಹಾರಾಜರುಗಳೆಲ್ಲರೂ ಪ್ರಜಾಪ್ರಭುತ್ವದ ವಿರೋಧಿಗಳೆಂದೇ ಬರೆಯಬೇಕಾಗುತ್ತದೆ. ಏಕೆಂದರೆ ಅವರುಗಳು ಯಾರು ಇಂದಿನ ಸಂವಿಧಾನ ದತ್ತವಾದ ಪ್ರಭುತ್ವನ್ನು ನಡೆಸಿಲ್ಲ. ಪ್ರಜಾಪ್ರಭುತ್ವ ಕಲ್ಪನೆಯಿಂದ ಇತಿಹಾಸ ನೋಡುವುದು ಕೂಡ ತಪ್ಪು. ಏಕೆಂದರೆ ಆ ಕಾಲದ ಚರಿತೆಯಲ್ಲಿ ಇಲ್ಲದನ್ನು ಕಾಣ ಬಯಸಿದರೆ ಅದು ಸಿಗುವುದಿಲ್ಲ. ಇದರಿಂದ ನಮ್ಮ ಪ್ರಭುತ್ವ ಒಪ್ಪುವ ಚರಿತ್ರೆ ನಮಗೆ ಲಬ್ಧವಾಗುವುದಿಲ್ಲ. ಕಾಲ ಪ್ರಜ್ಞೆ ಇರದೆ, ಚಾರಿತ್ರರಿಕ ದೃಷ್ಟಿ ಇರದೆ ಬರೆದ ಟಿಪ್ಪು ಕುರಿತಾದ ಅನೇಕ ಕೃತಿಗಳು ರೋಚಕತೆಯ ಧಾರ್ಮಿಕ ಒಡಕನ್ನು ಉಂಟುಮಾಡುವ ಪ್ರಚೋದನಾತ್ಮಕವಾದ ಕೃತಿಯಾಗಿದೆ. ಹಿಂದೂ ದೇವಾಲಯವನ್ನು ಲೂಟಿ ಮಾಡಿದ ಮರಾಠ ಬ್ರಾಹ್ಮಣ ಪೇಶ್ವೆಗಳ ಬಗ್ಗೆ ಮತೀಯ ಬರಹಗಾರರು ಜಾಣ ಮೌನವಹಿಸುವುದು ಏಕೆ? ಕಾನೂನಿನ ಅಥವಾ ವೈದ್ಯಶಾಸ್ತ್ರದ ಅರಿವೇ ಇರದ ನಾನು ಕಾನೂನಿನ ಅಥವಾ ವೈದ್ಯಶಾಸ್ತ್ರ ಕುರಿತು ಬರೆದರೆ ಏನು ಅಪಾಯವಾಗುವುದು? ಅದೇ ಅಪಾಯ ಚರಿತ್ರೆಯಲ್ಲೂ ಆಗುವುದು. ಆ ಎಲ್ಲ ಧರ್ಮದ ರಾಜರುಗಳಂತೆ ಟಿಪ್ಪು ಕೂಡ ಒಬ್ಬ ರಾಜ. ಟಿಪ್ಪು ಕುರಿತಾದ ಬರಹಗಳ ಓದಿಗಿಂತ ಭಿನ್ನವಾದ ನೈಜ್ಯ ಚರಿತ್ರೆಯ ಹೊಸ ಓದನ್ನು, ಸಂಶೋಧನೆಯನ್ನು ಬಯಸುವ ಆಕರ್ಷಕ ವ್ಯಕ್ತಿ, ವಸ್ತು ವಿಷಯವಾಗಿದೆ.