ಮೈಸೂರು ಸಂಸ್ಥಾನದಲ್ಲಿ ಇನ್‌ಫ್ಲುಯೆಂಜಾ ಸಾಂಕ್ರಾಮಿಕ ರೋಗ ಮತ್ತು ಸರ್ಕಾರ ಕೈಗೊಂಡ ಕ್ರಮಗಳು: ಒಂದು ಅವಲೋಕನ

Authors

  • LAKSHMIRANGAIAH K.

Keywords:

ಮೈಸೂರು ಸಂಸ್ಥಾನ, ಇನ್‌ಪ್ಲುಯೆಂಜಾ, ಸಾಂಕ್ರಾಮಿಕ ರೋಗ, ನೈರ್ಮಲ್ಯ ಆಯುಕ್ತರು, ಥೈಮೋಲ್ ದ್ರಾವಣ, ತಾತ್ಕಾಲಿಕ ಆಸ್ಪತ್ರೆ

Abstract

ಪ್ರಸ್ತುತ ಸಂಶೋಧನಾ ಲೇಖನವು ಮೊದಲ ಮಹಾಯುದ್ಧದ ಅಂತ್ಯದಲ್ಲಿ ವಿಶ್ವದಾದ್ಯಂತ ಹರಡಿದ್ದ ಇನ್‌ಫ್ಲುಯೆಂಜಾ ಸಾಂಕ್ರಾಮಿಕರೋಗವು ಸೈನಿಕರು ಮತ್ತು ವರ್ತಕರ ಮೂಲಕ ಕಲ್ಕತ್ತ ಮತ್ತು ಬಾಂಬೆಗೆ ಬಂದು ನಂತರ ದೇಶದಾದ್ಯಂತ ಹಬ್ಬಿ ಮೈಸೂರು ಸಂಸ್ಥಾನದ ಬೆಂಗಳೂರು ಮತ್ತು ಮೈಸೂರುಗಳಲ್ಲಿ ಹರಡಿ ಹೇಗೆ ಇಡೀ ಸಂಸ್ಥಾನದಾದ್ಯಂತ ಜನತೆಯನ್ನು ಬಾಧಿಸಿತು, ಜನರು ಅನುಭವಿಸಿದ ಸಾವು-ನೋವುಗಳು, ಸರ್ಕಾರ ರೋಗ ನಿವಾರಣೆಗೆ ಕೈಗೊಂಡ ಚಿಕಿತ್ಸೆ ಮತ್ತು ಪರಿಹಾರಕಾರ್ಯಗಳು ಮಹಾರಾಜರ ಆಡಳಿತ ವ್ಯವಸ್ಥೆ ನಗರಗಳಿಂದ ಹಳ್ಳಿಗಳವರೆವಿಗೆ ಸಾಂಕ್ರಾಮಿಕರೋಗ ನಿವಾರಣೆಗೆ ಶ್ರಮಿಸಿದ ರೀತಿ, ಸ್ಥಳೀಯ ಆಡಳಿತ ಘಟಕಗಳು, ಸಂಘಸಂಸ್ಥೆಗಳು, ಪ್ರಜಾಪ್ರಮುಖರು, ಸ್ವಯಂ ಸೇವಕರು, ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಇಲಾಖೆ, ವಿದ್ಯಾರ್ಥಿ ಸ್ವಯಂ ಸೇವಕರು ನಿರ್ವಹಿಸಿದ ಪಾತ್ರ ಇವೇ ಮೊದಲಾದವುಗಳನ್ನು ಅಧ್ಯಯನಿಸುವ ಉದ್ದೇಶವನ್ನು ಹೊಂದಿದೆ.

ಕರ್ನಾಟಕ ಇತಿಹಾಸದಲ್ಲಿ ಮಾತ್ರವಲ್ಲದೆ ಆಧುನಿಕ ಭಾರತದ ಚರಿತ್ರೆಯಲ್ಲಿ ಮೈಸೂರುಸಂಸ್ಥಾನದ ಇತಿಹಾಸವು ಅತ್ಯಂತ ಮಹತ್ವದ ಅಧ್ಯಾಯ. 1881ರ ನಂತರದ ಆಧುನಿಕ ಮೈಸೂರುಸಂಸ್ಥಾನದ ಇತಿಹಾಸವು ವಿಶೇಷವಾಗಿ ನಾಲ್ವಡಿಕೃಷ್ಣರಾಜಒಡೆಯರ ಆಳ್ವಿಕೆಯ ಕಾಲಘಟ್ಟವು ಪ್ರಗತಿಪರ ಹಾಗೂ ಜನಾನುರಾಗಿ ಆಳ್ವಿಕೆಯು ದೇಶೀಯ ಸಂಸ್ಥಾನಗಳಲ್ಲಿಯೇ ಏಕೆ ಭಾರತದಲ್ಲಿಯೇ ಹತ್ತು ಹಲವು ಪ್ರಥಮಗಳಿಗೆ ಸಾಕ್ಷಿಯಾಗಿ “ಮಾದರಿಸಂಸ್ಥಾನ”ವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕೃಷಿ, ಕೈಗಾರಿಕೆ, ಸಾಮಾಜಿಕ ಸುಧಾರಣೆ, ಶಿಕ್ಷಣ, ಆರೋಗ್ಯ ಮೊದಲಾದ ಕ್ಷೇತ್ರಗಳ ಸಾಧನೆಗಳು ಇಂದಿಗೂ ಸ್ಮರಣೀಯವಾದವುಗಳಾಗಿವೆ. ಮಹಾತ್ಮ ಗಾಂಧೀಜಿಯರವರು ಮೈಸೂರು ರಾಜ್ಯವನ್ನು ಆದರ್ಶ “ರಾಮರಾಜ್ಯ”ವೆಂದು ಕರೆದು ಮಹಾರಾಜರನ್ನು ರಾಜರ್ಷಿ ಎಂಬುದಾಗಿ ಗೌರವಿಸಿದ್ದು ಅವರ ಆಡಳಿತದ ಹಿರಿಮೆಗೆ ಸಾಕ್ಷಿಯಾಗಿದೆ. ಹೀಗೆ ಮಾದರಿ ರಾಜ್ಯವಾಗಿದ್ದ ಸಂಸ್ಥಾನವು ಹಲವುಬಾರಿ ಕ್ಷಾಮ, ಪ್ಲೇಗ್, ಕಾಲರಾ, ಸಿಡುಬು, ಮಲೇರಿಯಾದಂತಹ ಗಂಭೀರಕಾಯಿಲೆಗಳಿಗೆ ಗುರಿಯಾಗಿದ್ದು, ಮೊದಲ ಮಹಾಯುದ್ಧದ ಅಂತ್ಯದಲ್ಲಿ ಇಡೀ ಜಗತ್ತನ್ನು ಬಾಧಿಸಿದ ಇನ್‌ಫ್ಲುಯೆಂಜಾ ಎಂಬ ಸಾಂಕ್ರಾಮಿಕರೋಗಕ್ಕೆ ಗುರಿಯಾಗಿ ಜನತೆಯು ಸಾವುನೋವು ಸಂಕಷ್ಟಗಳಿಗೆ ಸಿಲುಕಿ ನರಳುವಂತಾಗಿತ್ತು.

Downloads

Published

01.04.2024

How to Cite

LAKSHMIRANGAIAH K. (2024). ಮೈಸೂರು ಸಂಸ್ಥಾನದಲ್ಲಿ ಇನ್‌ಫ್ಲುಯೆಂಜಾ ಸಾಂಕ್ರಾಮಿಕ ರೋಗ ಮತ್ತು ಸರ್ಕಾರ ಕೈಗೊಂಡ ಕ್ರಮಗಳು: ಒಂದು ಅವಲೋಕನ. AKSHARASURYA, 3(04), 24 to 37. Retrieved from http://aksharasurya.com/index.php/latest/article/view/340