ಮೈಸೂರು ಅರಸರ ಕಾಲದ ಕನ್ನಡ ಸಾಹಿತ್ಯ
Keywords:
ಚಿಕ್ಕದೇವರಾಜ ಒಡೆಯರ್, ರಣಧೀರ ಕಂಠೀರವ, ಚಿಕ್ಕದೇವ ರಾಜ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರುAbstract
1881ರಲ್ಲಿ ಬ್ರಿಟಿಷ್ ಕಮಿಷನರುಗಳ ಆಳ್ವಿಕೆ ಕೊನೆಗೊಂಡು ಮೈಸೂರು ಒಡೆಯರಿಗೆ ಅಧಿಕಾರ ಮರುಕಳಿಸಿತು. ಅನಂತರ ಅವರು ಸಾಹಿತ್ಯಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಹಾಗೆಯೇ ದಿವಾನರ ಬೆಂಬಲವೂ ಕೂಡ ಸಾಹಿತ್ಯ ಬೆಳವಣಿಗೆಯಲ್ಲಿ ಮುಖ್ಯಪಾತ್ರವಹಿಸಿದೆ. ಮಹಾರಾಜರುಗಳಾದ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜಒಡೆಯರ್, ರಣಧೀರ ಕಂಠೀರವ ನರಸರಾಜಒಡೆಯರ್, ಚಿಕ್ಕದೇವರಾಜ, ಚಾಮರಾಜಒಡೆಯರ್, ದಿವಾನರುಗಳಾದ ರಂಗಾಚಾರ್ಲು, ಶೇಷಾದ್ರಿ ಅಯ್ಯರ್, ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ಮುಂತಾದವರ ಕೊಡುಗೆಗಳು ಅಸ್ಮರಣೀಯವಾದದು.
ಸುಮಾರು 400 ವರ್ಷಗಳ ಕಾಲ ಆಳಿದ ಮೈಸೂರು ಅರಸರು ಸ್ವಯಂ ಕವಿಗಳೂ ಹೌದು. ಕಾವ್ಯ ಕನ್ನಡದ ಅನೇಕ ವಿದ್ವಾಂಸರು, ಕವಿ-ನಾಟಕಕಾರರಿಗೆ ಹಾಗೂ ಭಾಷಾಂತರಕಾರರಿಗೆ ಆಶ್ರಯ ನೀಡಿ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಮೈಸೂರು ಅರಸರ ಆರಂಭದ ಕಾಲಘಟ್ಟದಿಂದ ಭಾರತ ಸ್ವಾತಂತ್ರ್ಯಗೊಳ್ಳುವವರೆಗೂ ರಚಿತವಾದ ಕೃತಿಗಳೇ ಮೈಸೂರು ಅರಸರ ಐತಿಹ್ಯಕ್ಕೂ ಸಾಕ್ಷಿಯನ್ನು ಒದಗಿಸಿವೆ.
ಕನ್ನಡ ಸಾಹಿತ್ಯಕ್ಕೆ, ಪ್ರೋತ್ಸಾಹಿಸಿ ಸ್ಫೂರ್ತಿಯಾದ ಮೈಸೂರು ಅರಸರು ವಿಜಯನಗರದ ಪರಮಾಧಿಕಾರವನ್ನು ಅಲ್ಲಗಳೆದು ಸ್ವತಂತ್ರವಾದಾಗಿನಿಂದ ಮೈಸೂರು ಒಡೆಯರ ಸ್ವತಂತ್ರ ಆಡಳಿತದ ಕಾಲ ಆರಂಭವಾಯಿತು. ಒಂದನೆಯ ರಾಜ ಒಡೆಯರ ಕಾಲದಿಂದ ಆರಂಭಗೊಂಡು ಜಯಚಾಮರಾಜ ಒಡೆಯರ ಕಾಲದವರೆಗೂ ಕನ್ನಡ ಸಾಹಿತ್ಯವು ಸರ್ವತೋಮುಖ ಅಭಿವೃದ್ಧಿ ಪಡೆಯಿತು.