ಸರ್ವಜ್ಞನ ತ್ರಿಪದಿಗಳಲ್ಲಿ ಗುರುವಿನ ಮಹತ್ವ
Keywords:
ಸರ್ವಜ್ಞ, ವಚನ, ಗುರುವಿನ ಮಹತ್ವ, ಗುರು ಪದ್ಧತಿ, ಗುರುಬೋಧ ವಿಷಯ, ಗುರುಕರಣ ವಿಷಯ, ಗುರುವಿನಿಂದ ಮುಕ್ತಿAbstract
ಪ್ರಸ್ತುತ ಲೇಖನವು ಸರ್ವಜ್ಞನ ತ್ರಿಪದಿಗಳಲ್ಲಿ ಗುರುವಿನ ಮಹತ್ವ ಮತ್ತು ಗುರು ಹಾಗೂ ಶಿಷ್ಯರ ನಡುವಿನ ಸಂಬಂಧದ ಕುರಿತು ಚರ್ಚಿಸುತ್ತದೆ. ಈ ಕುರಿತು ಸರ್ವಜ್ಞನಲ್ಲಿ 80 ಕ್ಕೂ ಹೆಚ್ಚು ತ್ರಿಪದಿಗಳು ಸಿಗುತ್ತದೆ. ಶಿಕ್ಷಣದ ದೃಷ್ಟಿಯಿಂದ ನೋಡಿದರೆ ಸರ್ವಜ್ಞನು ಒಬ್ಬ ಸಾಮಾಜಿಕ ಗುರು ಎಂದು ಹೇಳಬಹುದು. ಇಂದು ಗುರು ಮತ್ತು ಶಿಷ್ಯರ ನಡುವಿನ ಸಂಬಂಧದಲ್ಲಿ ಬಿರುಕು ಇದೆ. ಗುರುವಿನ ಮಹತ್ವ, ಗುರು ಪದ್ಧತಿ, ಗುರುಬೋಧ ವಿಷಯ, ಗುರುಕರಣ ವಿಷಯ ಮತ್ತು ಗುರುವಿನಿಂದ ಮುಕ್ತಿ ಇತ್ಯಾದಿ.
ಸರ್ವಜ್ಞ ದೃಷ್ಟಿಯಲ್ಲಿ ಗುರು ಒಬ್ಬ ಶಿವ, ಕರುಣಾಮಯಿ, ಜ್ಯೋತಿ, ಮಾರ್ಗದರ್ಶಕ, ಬಂಧು, ದೈವ, ಕಲ್ಪವೃಕ್ಷ, ಮತ್ತು ಕಾಮದೇನು. ಇದನ್ನು ತನ್ನ ತ್ರಿಪದಿಗಳಲ್ಲಿ ಉಪಮಾ, ಯಮಕ, ರೂಪಕ ಮತ್ತು ದೃಷ್ಟಾಂತ ಅಲಂಕಾರಗಳ ಮೂಲಕ ವಿವರಿಸಿದ್ದಾನೆ.