ಪಂಪನ ದ್ರೌಪದಿ: ಮನಶಾಸ್ತ್ರೀಯ ಅಧ್ಯಯನ
Keywords:
ದ್ರೌಪದಿ, ಮನಶಾಸ್ತ್ರೀಯ, ಪಂಪ, ಜ್ವಾಲಾಮಾಲಿನಿ, ದುಶ್ಯಾಸನ, ಅಕ್ಷಯವಸ್ತ್ರ, ಭೀಮ, ಅರ್ಜುನ, ಸುಧೇಷ್ಣೆAbstract
ಕನ್ನಡ ಸಾಹಿತ್ಯವನ್ನು ಅನೇಕ ವಿಮರ್ಶಾ ಪ್ರಕಾರಗಳ ಮೂಲಕ ಪರಿಭಾವಿಸುವ ಕ್ರಮಗಳು ಬೆಳೆದು ಬಂದಿವೆ. ಅದರಲ್ಲಿ ಮನಶಾಸ್ತ್ರ ಸಹ ಮುಖ್ಯವಾಗಿದೆ. ಪ್ರಸ್ತುತ ಲೇಖನದಲ್ಲಿ ಪಂಪಭಾರತದ ಪ್ರಮುಖ ಪಾತ್ರವಾದ ದ್ರೌಪದಿಯ ಪಾತ್ರದ ಸ್ವಭಾವ, ನಡವಳಿಕೆಗಳನ್ನು ಮನೋನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಪಂಪ ಜನಮುಖಿಯಾದ ಕವಿ. ಅವನ ಪರಿಕಲ್ಪನೆಗಳು ದ್ರಷ್ಟಾರತೆಯನ್ನು ಹೊಂದಿದ್ದು ಕಾಲವನ್ನು ಮೀರುವ ಗುಣವನ್ನು ಅಂತರರ್ಗತಗೊಳಿಸಿಕೊಂಡಿವೆ. ಇಲ್ಲಿ ಮಹಾಭಾರತದ ಸಂಚಾಲತೆಗೆ ಕಾರಣವಾದ, ಪ್ರಮುಖ ವ್ಯಕ್ತಿಯಾದ ದ್ರೌಪದಿಯನ್ನು, ವೈಜ್ಞಾನಿಕವಾದ ವಿಮರ್ಶೆಯ ಗ್ರಹಿಕೆಯ ಮೂಲಕ ನೋಡಲಾಗಿದೆ.