ಹೊನ್ನಾಳಿ ತಾಲ್ಲೂಕಿನ ಶಾಸನೋಕ್ತ ಸ್ಥಳನಾಮಗಳ ಭಾಷಾವೈಜ್ಞಾನಿಕ ಪರಿಶೀಲನೆಗಳು
Abstract
ಶಾಸನಗಳನ್ನು ಅಧ್ಯಯನ ಮಾಡುವುದರಿಂದ ಅಂದಿನ ಕಾಲದ ಚರಿತ್ರೆಯ ಜೊತೆಗೆ ಆ ಕಾಲದ ಸಂಸ್ಕೃತಿ, ಭಾಷೆ, ಜನಪದ, ಉಚ್ಛಾರಣೆ, ಭಾಷಾ ಸ್ವರೂಪ ಮತ್ತು ಮೌಖಿಕತೆ, ಲಿಖಿತ ಸಾಹಿತ್ಯಗಳ ಬಗ್ಗೆ ಹೆಚ್ಚು ನಿಖರವಾದ ಮತ್ತು ಸತ್ಯವಾದ ಮಾಹಿತಿಗಳನ್ನು ನೀಡುವ ಆಕರಗಳಗಿರುತ್ತವೆ. “ಸೃಷ್ಟಿಯ ಪ್ರತಿಯೊಂದು ಪದಾರ್ಥಕ್ಕೂ ಒಂದು ಹಿನ್ನೆಲೆ ಇತಿಹಾಸವಿರುತ್ತದೆ, ಪ್ರತಿಯೊಬ್ಬ ವ್ಯಕ್ತಿಗೂ, ಪ್ರತಿಯೊಂದು ಊರಿಗು ಚರಿತ್ರೆ ಇರುತ್ತದೆ. ವ್ಯಕ್ತಿಯ ಹೆಸರು, ಊರಿನ ಹೆಸರುಗಳು ಬರಿಯ ಹೆಸರುಗಳಲ್ಲ ಆ ಹೆಸರುಗಳ ಉಸಿರಲ್ಲಿ, ಬಸಿರಲ್ಲಿ ಆತ್ಮಚರಿತ್ರೆ ಇರುತ್ತದೆ.” ಹೊನ್ನಾಳಿ ತಾಲ್ಲೂಕಿನ ಸ್ಥಳನಾಮಗಳ ಬಗ್ಗೆ ನಿಖರವಾಗಿ ತಿಳಿಯಲು ತಾಲ್ಲೂಕಿನಾದ್ಯಂತ ಸಂಚರಿಸಿ ಶಾಸನಗಳನ್ನು ಗುರುತಿಸಿ ಅವುಗಳ ದಾಖಲಿಕರಣ ಮಾಡಿರುವ ಬಿ. ಎಲ್. ರೈಸ್ ಸಂಪಾದಿಸಿರುವ ಎಪಿಗ್ರಪಿಯ ಕರ್ನಾಟಿಕದ ಸಂಪುಟ ೭ರಲ್ಲಿನ ಹೊನ್ನಾಳಿಯ ಶಾಸನಗಳ ಸಾರಾಂಶದಲ್ಲಿರುವ ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸಲಾಗಿದೆ. ಪ್ರಸ್ತುತ ದಾಖಲುಗೊಂಡಿರುವ ಸ್ಥಳನಾಮಗಳ ವ್ಯಾಕರಣದ ಹಿನ್ನೆಲೆಯಲ್ಲಿ ತುಲನಾತ್ಮಕವಾಗಿ ತಿಳಿಯಲಾಗಿದೆ.
References
ಎಂ. ಚಿದಾನಂದಮೂರ್ತಿ : ಕನ್ನಡ ಶಾಸನಗಳ ಸಾಂಸ್ಕೃತಿಕಅಧ್ಯಯನ : ಸಪ್ನ ಬುಕ್ ಹೌಸ್ ಬೆಂಗಳೂರು-೨೦೧೪, ಪುಟ : ೦೯
ದೇ.ಜ.ಗೌ : ಸ್ಥಳನಾಮ ವ್ಯಾಸಂಗ : ಸಹ್ಯಾದ್ರಿ ಪ್ರಕಾಶನ ಮೈಸೂರು-೧೯೯೦, ಪುಟ :೨೨
ಶಂ.ಬಾ.ಜೋಶಿ : ಎಡೆಗಳು ಹೇಳುವ ಕಂನಾಡು ಕಥೆಗಳು : ಮಾಧವ ಬಲ್ಲಾಳ ಬಂಧುಗಳು ಧಾರವಾಡ-೧೯೪೭, ಪುಟ : ೬