ಚಂದ್ರಶೇಖರ ಕಂಬಾರರ ನಾಟಕಗಳಲ್ಲಿನ ಮೇಲ್ವರ್ಗದ ಸ್ತ್ರೀಯರ ಪಾತ್ರ ಚಿತ್ರಣ
Keywords:
ತಾಯ್ತನ, ಆಕರ್ಷಣೆ, ಪಾಪ-ಪುಣ್ಯ, ಅಪಶಕುನ, ಗೌಡನ ರಾಕ್ಷಸತ್ವ, ಅನೈತಿಕ ಗರ್ಭಧಾರಣೆ, ಸ್ತ್ರೀವಾದಿ ಪ್ರಜ್ಞೆAbstract
ಪ್ರಸ್ತುತ ಸಂಶೋಧನಾ ಲೇಖನವು ಕಂಬಾರರ ನಾಟಕಗಳಲ್ಲಿ ಮೇಲ್ವರ್ಗದ ಸ್ತ್ರೀಯರ ಮನದ ಬಯಕೆಗಳನ್ನು ಕುರಿತು ಚರ್ಚಿಸುತ್ತದೆ. ಕಂಬಾರರು ಸ್ತ್ರೀಯನ್ನು ಜೈವಿಕ ಪತ್ರಗಳಾಗಿ ಗಮನಿಸುತ್ತಾರೆಯೇ ಹೊರತು ಸಂಸ್ಕೃತಿಯ ಆಳವಿನ್ಯಾಸದಲ್ಲಿ ಕಾಣಿಸುವ ಸ್ತ್ರೀ ವ್ಯಕ್ತಿತ್ವದ ಮೌಲ್ಯಮಾಪನಕ್ಕೆ ತೊಡಗುವುದಿಲ್ಲ. ಕುಟುಂಬದೊಳಗಿನ ಲೈಂಗಿಕ ಹಿಂಸೆಗಳನ್ನು ಪ್ರತಿಭಟಿಸುವ ನೆಲೆಯಲ್ಲಿ ಅವರ ನಾಟಕಗಳ ಆಶಯಗಳು ಕಾಣಿಸಿಕೊಳ್ಳುತ್ತವೆಯಾದರೂ, ಅಸ್ತಿತ್ವವನ್ನು ಮಾನ್ಯ ಮಾಡುವುದಿಲ್ಲ. ಅದರಲ್ಲೂ ಮೇಲ್ವರ್ಗದ ಸ್ತ್ರೀಯರ ಬದುಕಿನ ಚಿತ್ರಣವನ್ನು ವಿವರವಾಗಿ ಚಿತ್ರಿಸಿದ್ದಾರೆ.
ಕಂಬಾರರ ನಾಟಕಗಳಲ್ಲಿ ಮಹಿಳಾ ಪಾತ್ರಗಳು ಪಿತೃಪ್ರಭುತ್ವದ ದಬ್ಬಾಳಿಕೆಯನ್ನು ಬಹಿರಂಗಪಡಿಸಲು ಮತ್ತು ವಿರೋಧಿಸುವಂತೆ ಮಾಡುತ್ತಾರೆ. ಜೋಕುಮಾರಸ್ವಾಮಿಯಲ್ಲಿ ಗೌಡರು ಪ್ರಾಬಲ್ಯದ ರಚನೆಗಳನ್ನು ಉಳಿಸಿಕೊಳ್ಳುವ ಪಿತೃಪ್ರಧಾನ ಸಮಾಜದ ಉತ್ಪನ್ನವಾಗಿದ್ದಾರೆ. ಅವರು ಮಹಿಳೆ ಮತ್ತು ಪ್ರಕೃತಿಯನ್ನು ಅಭಾಗಲಬ್ದ ಜೀವಿಗಳಾಗಿ ಪರಿಗಣಿಸುತ್ತಾರೆ. ಅದು ಪುರುಷನ ಅಗತ್ಯಗಳಿಗಾಗಿ ಪ್ರಾಬಲ್ಯ ಮತ್ತು ಶೋಷಣೆಗೆ ಒಳಗಾಗುತ್ತದೆ. ಜೋಕುಮಾರಸ್ವಾಮಿಯ ನಾಟಕದ ಗೌಡ್ತಿ, ಹರಕೆಯಕುರಿ ನಾಟಕದ ಗೌಡ್ತಿ ಮತ್ತು ಸಿರಿಸಂಪಿಗೆಯ ಮೂಲಕ ಮಹಿಳೆಯ ಆಂತರಿಕ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.