ಉತ್ತರ ರಾಮಾಯಣ ಆಧಾರಿತ ಕನ್ನಡ ಕಾವ್ಯಗಳು
Keywords:
ವಾಲ್ಮೀಕಿ ರಾಮಾಯಣ, ಪ್ರಕ್ಷಿಪ್ತ ಭಾಗ, ಉತ್ತರ ರಾಮಾಯಣ, ಕೃತತ್ವ ಶಕ್ತಿ, ಸೀತಾ ಪರಿತ್ಯಾಗ, ಅಶ್ವಮೇಧಯಾಗ, ಸೀತಾ ಶಪಥ, ಆಧ್ಯಾತ್ಮಿಕAbstract
ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿರುವ ರಾಮಾಯಣ ಶಕ್ತಿಯುತ ಶ್ರವ್ಯಕಾವ್ಯವಾಗಿ ರಚನೆಯಾಗಿದ್ದು, ಈ ರಾಮಾಯಣದ ಮೂಲಕ ಸಾವಿರಾರು ವರ್ಷಗಳ ಹಿಂದಿನ ಇನ್ನು ಮುಂಬರುವ ಲಕ್ಷಾಂತರ ವರ್ಷಗಳ ಜನರ ಬದುಕಿಗೆ ಪ್ರಜ್ಞಾವಂತ ಪ್ರಗತಿಯನ್ನು, ಪ್ರಜ್ಞೆಯ ಜೀವನವನ್ನು ಕಟ್ಟಿ ಕೊಡುತ್ತದೆ. ವಾಲ್ಮೀಕಿ ವಿರಚಿತ ರಾಮಾಯಣದ ಉತ್ತರ ರಾಮಾಯಣ ಭಾಗವು 14 ವರ್ಷ ವನವಾಸ ಮುಗಿಸಿ ಸೀತೆಯನ್ನು ಅಪಹರಿಸಿದ್ದ ರಾವಣನನ್ನು ಸಂಹರಿಸಿ, ಅಯೋಧ್ಯೆಗೆ ಹಿಂತಿರುಗಿ, ಪಟ್ಟಾಭಿಷೇಕವಾದ ನಂತರದ ಭಾಗವೇ ಉತ್ತರ ರಾಮಾಯಾಣ. ಈ ಭಾಗ ಪ್ರಕ್ಷಿಪ್ತ ಎಂಬ ವಾದ ವಿವಾದಗಳು ನಡೆದರೂ ಉತ್ತರ ರಾಮಾಯಣಕ್ಕೆ ಸಂಬಂಧಿಸಿದ ಹಲವಾರು ಭಾಗಶಃ ಹಾಗೂ ಪೂರ್ಣ ಪ್ರಮಾಣದ ಕೃತಿಗಳು ಕನ್ನಡದಲ್ಲಿ ರಚನೆಯಾದವು. ಕನ್ನಡ ಉತ್ತರ ರಾಮಾಯಣದಲ್ಲಿ ನಾರಾಯಣ, ನರಸ, ತಿರುಮಲೆ ವೈದ್ಯ, ಯೋಗೀಂದ್ರ, ಸೋಸಲೆ ಅಯ್ಯಶಾಸ್ತ್ರಿ ಇವರು ಕೃತಿ ರಚನೆ ಮಾಡಿದರೂ, ಕನ್ನಡ ಸಾಹಿತ್ಯದಲ್ಲಿ ಅಲಕ್ಷ್ಯಕ್ಕೆ ಒಳಪಟ್ಟ ಕವಿಗಳು. ಸಂಸ್ಕೃತ ರಾಮಾಯಣದ ವಸ್ತುವನ್ನು ಅನುಸರಿಸಿ ಕನ್ನಡ ಉತ್ತರ ರಾಮಾಯಣ ಕೃತಿಯನ್ನು ಸಮರ್ಥವಾಗಿ ರಚಿಸಿದರೂ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿಲ್ಲ. ಸುಮಾರು 15ನೇ ಶತಮಾನದಿಂದ 19ನೇ ಶತಮಾನದವರೆಗೆ ಕನ್ನಡದಲ್ಲಿ ರಚಿತವಾಗಿರುವ ಉತ್ತರ ರಾಮಾಯಣಕ್ಕೆ ಸಂಬಂಧಿಸಿದ ಕಾವ್ಯ ಕೃತಿಗಳಲ್ಲಿ ಲಕ್ಷ್ಮೀಶನನ್ನು ಹೊರತುಪಡಿಸಿದರೆ, ಪೂರ್ಣ ಪ್ರಮಾಣದಲ್ಲಿದ್ದ ಉತ್ತರ ರಾಮಾಯಣ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಕವಿಗಳ ಹಾಗೂ ಅವರ ಕಾವ್ಯಗಳನ್ನು ಕನ್ನಡ ಸಾಹಿತ್ಯಕ್ಕೆ ತಿಳಿಸುವ ಉದ್ದೇಶವಾಗಿದೆ.