ಸು. ರುದ್ರಮೂರ್ತಿಶಾಸ್ತ್ರಿಯವರ ಚಾರಿತ್ರಿಕ ಕಾದಂಬರಿಯಲ್ಲಿ ಕನಕದಾಸರ ವ್ಯಕ್ತಿತ್ವ
Keywords:
ಅಶೋಕ, ಔರಂಗಜೇಬ, ಚಾಣಕ್ಯ, ಕುಮಾರರಾಮ, ಕನಕದಾಸ, ಚಾರಿತ್ರಿಕ ಕಾದಂಬರಿ, ಐತಿಹಾಸಿಕ ಕಾದಂಬರಿAbstract
ಸು. ರುದ್ರಮೂರ್ತಿಶಾಸ್ತ್ರಿ ಅವರು ಕನ್ನಡ ನಾಡು ಕಂಡ ಅಪರೂಪದ ಸೃಜನಶೀಲ ಬರಹಗಾರರಲ್ಲಿ ಒಬ್ಬರು. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವಂತಹ ಶಾಸ್ತ್ರಿಗಳು ಅಶೋಕ, ಔರಂಗಜೇಬ, ಚಾಣಕ್ಯ, ಕುಮಾರರಾಮ ಮೊದಲಾದ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಕನಕದಾಸ ಕೃತಿಯು ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಮೌಲಿಕ ಸೇರ್ಪಡೆಯಾಗಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಕನಕದಾಸನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ, ಕಂಗೊಳಿಸುವ ದೇಗುಲ ಒಂದನ್ನು ಕಡೆದು ಇಟ್ಟಿದ್ದಾರೆ. ಕಾದಂಬರಿಯ ಕಲೆ, ಜೀವನ ಚರಿತ್ರೆ ವಿನ್ಯಾಸ ಎರಡು ಇಲ್ಲಿ ಸಮ್ಮಿಲನಗೊಂಡಿದೆ.