ಕನ್ನಡ ನಾಡು-ನುಡಿ-ಜಲದ ಅಸ್ಮಿತೆ
Keywords:
ಅಸ್ಮಿತೆ, ಏಕೀಕರಣ, ಉಪಭಾಷೆ, ಪ್ರಾದೇಶಿಕ ಭಾಷೆ, ಅಭಿವ್ಯಕ್ತಿ, ಆತಂಕAbstract
ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಯ ಬಗೆಗೆ ಇಂದು ಪ್ರತಿಯೊಬ್ಬರು ಆಲೋಚಿಸಬೇಕಿದೆ. ಕನ್ನಡ ಸಾಹಿತ್ಯದ ಕವಿಗಳಾದ ಶ್ರೀ ವಿಜಯ, ಪಂಪ, ಆಂಡಯ್ಯ, ನಯಸೇನ ಹಾಗೂ ಹೊಸಗನ್ನಡದ ಸಂದರ್ಭದ ಕವಿಗಳಾದ ಬಿ.ಎಂ.ಶ್ರೀ., ತೀ.ನಂ.ಶ್ರೀ., ಆನಂದಕಂದ, ಕುವೆಂಪು, ವಿ.ಸೀತಾರಾಮಯ್ಯ ಮೊದಲಾದವರು ನಾಡಿನ ಕುರಿತಾಗಿ ನುಡಿಯ ಕುರಿತಾಗಿ ಅಭಿಮಾನವನ್ನು ಹಾಗೂ ಕನ್ನಡದ ಸ್ಥಿತಿಯನ್ನು ಕುರಿತು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ನಾಡಿನ ಏಕೀಕರಣ, ಭಾಷಾ ವರ್ಗೀಕರಣ, ಪ್ರಾಂತ್ಯ ವಿಭಜನೆ, ಕನ್ನಡಿಗರಲ್ಲಿನ ಒಗ್ಗಟ್ಟಿನ ಕೊರತೆ ಮೊದಲಾದವುಗಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿ ಕನ್ನಡದ ಅಸ್ತಿತ್ವಕ್ಕಾಗಿ ಶ್ರಮಿಸುವಂತೆ ಕನ್ನಡಿಗರನ್ನು ಎಚ್ಚರಿಸುತ್ತಾರೆ.