ಯುಗ ಪ್ರವರ್ತಕ ಕವಿ ಹರಿಹರ ಮತ್ತು ಮಹಾಕವಿ ಸೇಕ್ಕಿಲಾರ್
Keywords:
ಹರಿಹರ, ವರ್ಗ ಭೇದ, ವರ್ಣ ಭೇದ, ಯುಗ ಪ್ರವರ್ತಕ, ಶೈವ ನಾಯನ್ ಮಾರ್, ತೌಲನಿಕAbstract
ಮನುಷ್ಯನ ಸಂಕೀರ್ಣ ಜೀವನಕ್ಕೆ ಉನ್ನತವಾದ ಮೌಲ್ಯಗಳನ್ನು ದೊರಕಿಸಿಕೊಟ್ಟ ನಮ್ಮ ಅನೇಕ ಪ್ರಾಚೀನ ಕವಿಗಳ ಸಾಲಿನಲ್ಲಿ ನಿಲ್ಲುವ ಕವಿ; ಸಹಸ್ರ ವರ್ಷಗಳ ಕನ್ನಡ ಸಾಹಿತ್ಯ ಶ್ರೇಣಿಯಲ್ಲಿ ಪಂಪ, ಕುಮಾರವ್ಯಾಸನಂತೆ ಕಂಗೊಳಿಸುವ ಮಹೋನ್ನತ ಶಿಖರದಂತಿರುವ ಕವಿ ಹರಿಹರ. ಶರಣ ಜೀವನ ಮತ್ತು ವಚನ ಸಾಹಿತ್ಯ ಚಳವಳಿ ಒಂದು ಮಹಾಪೂರದಂತೆ ಬಂದು ಇಳಿದ ಮೇಲೆ ಅದರ ನೆನಪಿನಿಂದ ಪ್ರೇರಣೆ ಹೊಂದಿ ಸಾಹಿತ್ಯ ನಿರ್ಮಾಣ ಮಾಡಿದವರಲ್ಲಿ ಹರಿಹರನೂ ಒಬ್ಬ.
ಹರಿಹರನು ಬಸವಾದಿ ಶರಣರ ಬಗ್ಗೆ ದಾಖಲಿಸದೇ ಹೋಗಿದ್ದರೆ ಕರ್ನಾಟಕದ ಬಹುಮುಖ್ಯ ಘಟ್ಟದ ವಿವರಗಳನ್ನು ಕಳೆದುಕೊಳ್ಳುತ್ತಿದ್ದೆವು. ಪುರಾತನ ಶರಣರ ಚರಿತ್ರೆಗಳನ್ನು ಕಾವ್ಯಗೊಳಿಸುವುದು ಎಂದರೆ ಅವರ ಮೌಲ್ಯಗಳನ್ನು ಕಾವ್ಯಗೊಳಿಸುವುದೇ ಆಗಿದೆ.
ಇದೇ ರೀತಿ ಹರಿಹರನ ಸಮಕಾಲೀನರಾದ ತಮಿಳುನಾಡಿನ ಮಹಾಕವಿ ಸೇಕ್ಕಿಲಾರ್ ಅವರು ತಮಿಳಿನಲ್ಲಿ ಶೈವ ನಾಯನ್ ಮಾರರ (ಶರಣರ) ಜೀವನ ಕಥೆಯನ್ನು ವಿವರಿಸುವ 4253 ಪದ್ಯಗಳನ್ನು ‘ಪೆರಿಯ ಪುರಾಣಂ’ ಎಂಬ ಕೃತಿಯಲ್ಲಿ ರಚಿಸಿದ್ದಾರೆ. ಈ ಇಬ್ಬರು ಕವಿಗಳು ರಚಿಸಿರುವ ಶಿವಶರಣರ ಸಾಮಾನ್ಯ ಜೀವನದ ತಾತ್ವಿಕ ಚಿಂತನೆಗಳನ್ನು ತೌಲನಿಕವಾಗಿ ಅಭ್ಯಾಸ ಮಾಡುವುದು ನನ್ನ ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ.