ಪ್ರೊ. ಬಿ. ಗಂಗಾಧರಮೂರ್ತಿಯವರ ಅನುವಾದ ಕೃತಿಗಳ ಕಿರು ಪರಿಚಯ
Keywords:
ಬಿ. ಗಂಗಾಧರಮೂರ್ತಿ, ಅನುವಾದ, ಸಾಮಾಜಿಕ ಪ್ರಜ್ಞೆ, ವೈಚಾರಿಕ ಚಿಂತನೆ, ಸಾಮಾಜಿಕ ಹೋರಾಟAbstract
ಪ್ರೊ. ಬಿ. ಗಂಗಾಧರಮೂರ್ತಿರವರು ಕನ್ನಡ ಸಾಹಿತ್ಯಕ್ಕೆ ತಮ್ಮ ಅನುವಾದ ಸಾಹಿತ್ಯದ ಮೂಲಕ ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅನುವಾದ ಕೃತಿಗಳ ಮುಖಾಂತರ ಸಮಾಜವನ್ನು ತಿದ್ದುವ ಕೆಲಸಕ್ಕೆ ಮುಂದಾದರು. ಇವರು ಅನುವಾದಿಸಿರುವ ಕೃತಿಗಳ ಮೂಲ ಉದ್ದೇಶ ಸಾಮಾಜಿಕ ಬದಲಾವಣೆ. ಬೌದ್ಧಿಕವಾಗಿ ಜನರ ವಿಚಾರಗಳನ್ನು ಬದಲಿಸುವುದೇ ಆಗಿದೆ. ಸಾಮಾನ್ಯವಾಗಿ ಅನುವಾದ ಯಾವುದೇ ಭಾಷಾ ಸಾಹಿತ್ಯದ ಬೆಳವಣಿಗೆಗೆ ಅಗತ್ಯವಾದ ಅಂಶವಾಗಿದೆ. ಭಾಷೆಯಿಂದ ಭಾಷೆಗೆ ಅನುವಾದವಾಗುವಾಗ ಹಲವು ವ್ಯತ್ಯಾಸಗಳುಂಟಾಗುವುದು ಸಹಜವಾದುದು. ಕೆಲವು ಸಾರಿ ಅನುವಾದದ ಅಳವಡಿಕೆಯ ಕೆಲಸವೂ ನೆಡೆಯಬಹುದು. ಅನುವಾದವು ಕೃತಿಯೊಂದರ ಭಾಷಾಂತರವಾಗಿರುತ್ತದೆ. ಅಳವಡಿಸುವ ಬರಹಗಾರ ತನಗೆ ಅಗತ್ಯವೆನಿಸಿದ ಯಾವುದೇ ವಿಷಯಗಳನ್ನು ಸೇರಿಸುವ ಸಾದ್ಯತೆಗಳಿರುತ್ತದೆ. ಮೂಲ ಸಾಹಿತ್ಯ ಕೃತಿಗೆ ಸ್ವಲ್ಪವೂ ಚ್ಯುತಿಬಾರದ ಹಾಗೆ ಅಲ್ಲಿರುವ ಅಂಶಗಳನ್ನೆಲ್ಲಾ ಕನ್ನಡಕ್ಕೆ ಅನುವಾದಿಸಿ, ಕನ್ನಡ ನೆಲದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.