ಕಗ್ಗರಸಧಾರೆ ಬಹುಶಿಸ್ತೀಯ ನೋಟಗಳು

Authors

  • SHYLAJA V.

Keywords:

ಹೆಬ್ಬದುಕು, ಬಹುಶಿಸ್ತೀಯ, ಜಗದ್ವಿಶಾಲ, ಬ್ರಹ್ಮಾಂಡ, ಸುರಾಸುರರು, ಕೈಗನ್ನಡಿ

Abstract

ಮಾನವನ ಉನ್ನತಿಗೆ ಏನೆಲ್ಲಾ ಬೇಕು ಎಲ್ಲವನ್ನೂ ಕಗ್ಗದಲ್ಲಿ ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿದ್ದಾರೆ. ಮೌಲಿಕವಾದ ಈ ಕೃತಿಯಲ್ಲಿ ತತ್ವಶಾಸ್ತ್ರ, ಸ್ತ್ರೀವಾದಿ ಚಿಂತನೆ, ತಾರ್ಕಿಕತೆ, ದಾರ್ಶನಿಕತೆ, ವೈಜ್ಞಾನಿಕ ಚಿಂತನೆ, ದೈವೀಕ ನಂಬಿಕೆ, ಸಂಸ್ಕೃತಿ, ಆರೋಗ್ಯ ಶಾಸ್ತ್ರ, ಯೋಗ ಶಾಸ್ತ್ರ ಹೀಗೆ ನಾನ ಜ್ಞಾನ ಶಾಖೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಭುವಿಯಿಂದ ಬ್ರಹ್ಮಾಂಡದವರೆಗೆ, ಅಣುವಿನಿಂದ ಆಗಸದವರೆಗಿನ ವಿವಿಧ ಆಯಾಮಗಳನ್ನು ಸೆರೆಹಿಡಿದಿದೆ. ಪ್ರಬಂಧ, ಭಾಷಣ, ಚರ್ಚೆಯಲ್ಲಿಯೂ ಕಗ್ಗ ಸ್ಥಾನ ಪಡೆದು ಜನಪ್ರಿಯವಾಗಿದೆ. ಮುದ್ರಣ, ಮರು ಮುದ್ರಣ, ಅನುವಾದಗಳ ಚೌಕಟ್ಟಿನಲ್ಲಿ ನಿಲ್ಲದೆ ಗಮಕ ಸುಗಮ ಸಂಗೀತದಂತ ಸಾಧನಗಳ ಮೂಲಕ ಜನಪ್ರಿಯತೆಯನ್ನು ಮತ್ತಷ್ಟು ಸದೃಢಗೊಳಿಸಿದೆ. ಕಗ್ಗವನ್ನು ‘ಕನ್ನಡದ ಭಗವದ್ಗೀತೆ’ ಎಂದು ಕರೆಯುತ್ತೇವೆ. ಮಂಕುತಿಮ್ಮನ ಕಗ್ಗ ಮತ್ತು ಭಗವದ್ಗೀತೆಗೆ ಹೋಲಿಸಿದರೆ, ಗೀತೆಯಲ್ಲಿ ಸಮಸ್ಯೆಯ ಮೂಲ ತಿಳಿಯುವುದಾದರೆ ಕಗ್ಗದಲ್ಲಿ ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಸಲಾಗಿದೆ. ಕಗ್ಗದ ಪದ್ಯಗಳು ಶಾಸ್ತ್ರ ಅಧ್ಯಯನ ಮಾತ್ರವಲ್ಲದೆ ಗಾಢವಾದ ಜೀವನಾನುಭವದಿಂದ ದಕ್ಕಿರುವ ಸ್ವೋಪಜ್ಞ ಚಿಂತನೆಗಳೆನ್ನುವ ಅರಿವು ಮೂಡುತ್ತದೆ. ಬಹುತೇಕ ಎಲ್ಲ ಪದ್ಯಗಳು ಸಾಮಾನ್ಯ ಜನರಿಗೆ ಸುಲಭ ಗ್ರಾಹ್ಯವಾಗಿದ್ದು ಅಲ್ಲಿನ ಭಾಷೆಯು ಕಾವ್ಯಾಲಂಕಾರ ಸೌಂದರ್ಯದ ದೃಷ್ಟಿಯಿಂದಲೂ ತತ್ವ ವಿಚಾರಗಳಿಂದಲೂ ಅನನ್ಯವಾಗಿದೆ. ಕಂಗೊಳಿಸುವ ಅಸುರಿನ ಸೊಬಗಿಗೆ ಕಾರಣವೇನು? ಬೇರು? ಮಣ್ಣು? ಬೆಳಕು? ಯಾವುದು ಕಾರಣ? ಎನ್ನುವ ಡಿವಿಜಿರ ಮಾತನ್ನೇ ಪುನರುಚ್ಚರಿಸಬೇಕಾಗುತ್ತದೆ. ಕಗ್ಗದ ಜನಪ್ರಿಯತೆಗೆ ಅಲ್ಲಿನ ಪದ್ಯಗಳೇ ಕಾರಣವೆನ್ನಬಹುದು. ಇಲ್ಲಿನ ಪದ್ಯಗಳು ಸಾಮಾನ್ಯ ಜನರ ಮನ, ಮನೆಯ ಬೆಳಕಾಗಿ ಪ್ರಜ್ವಲಿಸುತ್ತಿವೆ. ಇದು ಪಂಡಿತ ಪಾಮರರನ್ನು ಉದ್ದೇಶಿಸಿದ್ದಲ್ಲ. ಸಾಮಾನ್ಯ ಜನರನ್ನು, ಜೀವನ ಪ್ರೀತಿಯನ್ನು ಉಣಬಡಿಸುವ ಸಾಹಿತ್ಯವಾಗಿ ಮನದ ಮಲಿನವನ್ನು ಸ್ವಚ್ಛಗೊಳಿಸಿ ಬದುಕಿನ ನಂಬಿಕೆಯನ್ನು ಹೆಚ್ಚಿಸುತ್ತದೆ.

Downloads

Published

05.01.2024

How to Cite

SHYLAJA V. (2024). ಕಗ್ಗರಸಧಾರೆ ಬಹುಶಿಸ್ತೀಯ ನೋಟಗಳು. AKSHARASURYA, 3(01), 124–136. Retrieved from http://aksharasurya.com/index.php/latest/article/view/303

Issue

Section

ಪುಸ್ತಕ ವಿಮರ್ಶೆ. | BOOK REVIEW.