ಕನ್ನಡದ ಕೆಲವು ಅಪರೂಪದ ಕವಿತೆಗಳು
Keywords:
ಭಾವಗೀತೆ, ದರ್ಶನ, ಜನಮಾನಸ, ತಾಕಲಾಟ, ರಮಣೀಯತೆ, ಪಶ್ಚಿಮ ಘಟ್ಟಗಳುAbstract
ಕನ್ನಡದ ಅಪರೂಪದ ಕವಿತೆಗಳು ಲೇಖನವು ಹೊಸಗನ್ನಡದ ಭಾವಗೀತೆಗಳಲ್ಲಿ ಅಷ್ಟೇನು ಪರಿಚಿತವಿರದ ಕೆಲವು ಕವಿತೆಗಳ ಮಹತ್ವವನ್ನು ಚರ್ಚಿಸುವ ಲೇಖನವಾಗಿದೆ. ಇಲ್ಲಿ ಕೆ. ಎಸ್. ನರಸಿಂಹಸ್ವಾಮಿ, ದ. ರಾ. ಬೇಂದ್ರೆ, ಕುವೆಂಪು, ಅಡಿಗರ ಕವಿತೆಗಳ ಕೆಲವು ಸಾಲಗಳನ್ನು ಉಲ್ಲೇಖ ನೀಡಲಾಗಿದೆ. ಪ್ರಕೃತಿಯ ಮಹತ್ವವನ್ನು ಸಾರುವ ಕವಿತೆಗಳನ್ನು ಓದುಗರಿಗೆ ಪರಿಚಯಿಸುವ ಮೂಲಕ ಭಾವಗೀತೆಗಳ ಹಿರಿಮೆಯನ್ನು ಪರಿಚಯಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಬದಲಾದ ಸಾಮಾಜಿಕ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಮನುಷ್ಯನನ್ನಾಗಿಸುವಲ್ಲಿ ಕಲೆ, ಸಾಹಿತ್ಯ, ಸಂಗೀತ ಪ್ರಮುಖವಾಗುತ್ತವೆ. ಆದರೆ, ಅತ್ಯಂತ ಅಮುಲ್ಯವಾದ ಹಲವು ಕವಿತೆಗಳು ನಾನಾ ಕಾರಣಗಳಿಗಾಗಿ ಶಾಲಾ, ಕಾಲೇಜು, ವಿಶ್ವವಿದ್ಯಾನಿಯಲಗಳ ಪಠ್ಯಗಳಲ್ಲಿ ಸೇರದಿರುವುದು ದುರಂತ. ಹೊಸ ಕಾಲದ ಹೊಸ ಆಲೋಚನೆಯ ಹೊಸ ಬರಹಗಾರರು ಮತ್ತು ಹೊಸ ಅಭಿವ್ಯಕ್ತಿಗಳು ಸಾಹಿತ್ಯ ಲೋಕವನ್ನು ಪ್ರವೇಶಿಸಲಿ. ಅವುಗಳ ಓದಿನಿಂದ ಓದುಗರ ಅರಿವು ವಿಸ್ತಾರಗೊಳ್ಳಲಿ, ಮನಸ್ಸು ಮುದಗೊಳಲಿ ಹಾಗೂ ಪೂರ್ವಾಗ್ರ ಪೀಡಿತ ಮನಸ್ಥಿತಿಯಿಂದ ಹೊರಬಂದು ಉತ್ತಮವಾದುದ್ದನ್ನು ಓದುವ, ಮೆಚ್ಚುವ ವಿಶಾಲತೆ ಹೆಚ್ಚಾಗಲಿ.