ಸಿ. ಎನ್. ಮುಕ್ತಾರವರ ಕಾದಂಬರಿಗಳಲ್ಲಿ ವಿಧವಾವಿವಾಹ: ಒಂದು ವಿಹಂಗಮ ನೋಟ
Keywords:
ಜೀವನ ಮೌಲ್ಯ, ಪಿತೃ ಪ್ರಧಾನ ಸಮಾಜ, ಸುಮಂಗಲಿತನ, ಶೋಚನೀಯ ಸ್ಥಿತಿ, ಸಮಾನತೆ, ಸ್ವಾವಲಂಭಿ ಬದುಕು, ಸಂಪ್ರದಾಯ, ಪುನರ್ವಿವಾಹ, ಸ್ಥಿತ್ಯಂತರ, ಅಸ್ಥಿತ್ವAbstract
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ನಮ್ಮ ಸಮಾಜ ಎದುರಿಸುತ್ತಿದ್ದ ಬಹುದೊಡ್ಡ ಸಾಮಜಿಕ ಸಮಸ್ಯೆಗಳಲ್ಲಿ ವಿಧವಾ ಸಮಸ್ಯೆಯೂ ಒಂದು. ಬಾಲ್ಯವಿವಾಹದಿಂದಾಗಿ ಬಹುಬೇಗನೆ ವಿವಾಹಕ್ಕೆ ಒಳಗಾಗುತಿದ್ದ ಹೆಣ್ಣುಮಕ್ಕಳು ಕಾರಣಾಂತರಗಳಿಂದ ಪತಿ ಮರಣ ಹೊಂದಿದಾಗ ವೈಧವ್ಯದ ಪಟ್ಟ ಹೊರುತ್ತಿದ್ದರು. ಬಾಲ್ಯದಲ್ಲಿಯೇ ವೈಧವ್ಯದ ಪಟ್ಟ ಮುಟ್ಟುತ್ತಿದ್ದ ಪುಟ್ಟ ವಿಧವೆಯರ ಗೋಳಂತೂ ಹೇಳತೀರದು. ವಿಧವೆಯರು ಅನುಸರಿಸಬೇಕಾದ ಜೀವನ-ಲಕ್ಷಣಗಳ ಕುರಿತಾಗಿ ಸಮಾಜ ಅಲಿಖಿತ ಶಾಸನವನ್ನೇ ಬರೆದಿತ್ತು. ವಿಧವೆಯರು ತನ್ನ ವಯೋಸಹಜವಾದ ಆಸೆ-ಆಕಾಂಕ್ಷೆಗಳನ್ನು ಅದುಮಿಟ್ಟು ನರಕ ಸದೃಶ ಬಾಳು ಬಾಳಬೇಕಿತ್ತು. ಬಳೆ ತೊಡದೆ, ಹೂಮುಡಿಯದೆ, ತಿಲಕವಿಡದೆ, ಬಿಳಿ ಅಥವಾ ಕೆಂಪು ಬಣ್ಣದ ಸೀರೆಯುಟ್ಟು ಕೇಶಮುಂಡನ ಮಾಡಿಸಿ ಅಪಶಕುನದ ಸಂಕೇತವೆಂಬಂತೆ ಬಿಂಬಿತವಾಗಿ ಮನೆಯವರಿಗೆ ಹೊರೆಯಾಗಿ ಬಾಳಬೇಕಿದ್ದ ವಿಧವೆಯರ ಸ್ಥಿತಿ ಹೀನಾಯವಾಗಿತ್ತು.