ಶಾಸನಗಳ ಹಿನ್ನಲೆಯಲ್ಲಿ ‘ಆನೇಕಲ್ ತಾಲ್ಲೂಕು’ ಒಂದು ಅವಲೋಕನ
Keywords:
ಶಾಸನಗಳು, ಆನೆಮಲೆ, ಗಂಗರು, ಚೋಳರು, ಪಾಳೆಯಗಾರರು, ಹುಲಿಕಲ್ಲು, ಶ್ರೀ ಪುರುಷ, ಗಂಗವಾಡಿ, ಸುಗಟೂರುAbstract
ಕ್ರಿ.ಶ. 4ನೇ ಶತಮಾನದ ಐತಿಹಾಸಿಕ ದಾಖಲೆ ಹೊಂದಿರುವ ಆನೇಕಲ್ ತಾಲ್ಲೂಕಿನಲ್ಲಿ ಪ್ರಮುಖ ಶಾಸನಗಳು ಲಭ್ಯವಾಗಿವೆ. ಪ್ರಾಚೀನ ಆನೆಮಲೆ ಪ್ರದೇಶದ ಹುಲಿಕಲ್ಲು ಎಂಬ ಸ್ಥಳದಲ್ಲೇ ಆನೇಕಲ್ಲನ್ನು ಸ್ಥಾಪಿಸಲಾಯಿತೆಂಬ ವಿವರ ಆನೇಕಲ್ ಪಾಳೆಯಗಾರರ ಕೈಫಿಯತ್ತಿನಲ್ಲಿ ಗುರುತಿಸಲಾಗಿದೆ. ಕ್ರಿ.ಶ. 4ನೇ ಶತಮಾನದಿಂದ ಗಂಗರು, ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಅರಸರು, ಸುಗಟೂರು ಪಾಳೆಗಾರರು ತಾಲ್ಲೂಕಿನ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಲಭ್ಯವಾಗಿರುವ ಪ್ರತಿಯೊಂದು ಶಾಸನಗಳು ಆನೇಕಲ್ ತಾಲ್ಲೂಕಿನ ಸಮಗ್ರ ದಾಖಲೆಗಳನ್ನು ಒದಗಿಸುವಲ್ಲಿ ಮಹತ್ವದ ಆಧಾರವನ್ನು ಒದಗಿಸಿವೆ ಎಂಬುದರ ಬಗ್ಗೆ ತಿಳಿಸುವ ಪ್ರಯತ್ನವೇ ಈ ಲೇಖನ.