ತುಮಕೂರು ಪರಿಸರದ ಶೂನ್ಯ ಸಂಪಾದನೆಗಳು: ಒಂದು ಅವಲೋಕನ

Authors

  • C. NAGABHUSHAN Bangalore University

Keywords:

ಅನುಭವ ಮಂಟಪ, ಹನ್ನೆರಡನೇ ಶತಮಾನ, ಶೂನ್ಯ ಸಂಪಾದನೆ, ಸಂಕಲನಕಾರ, ವಚನಕಾರ

Abstract

ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ನಡೆದ ಧಾರ್ಮಿಕ ಚಿಂತನೆಯಲ್ಲಿ ನಿರ್ಮಾಣವಾದ ವಚನಗಳ ವಾಸ್ತವಿಕತೆಯನ್ನು ಹದಿನಾರನೆಯ ಶತಮಾನದಲ್ಲಿ ಪೂರಕ ಸಾಮಗ್ರಿಗಳಿಂದ ಕಟ್ಟಿಕೊಡುವ ಪ್ರಯತ್ನ ನಡೆಯಿತು. ಉಪಲಬ್ಧ ವಚನಗಳನ್ನು ಆಯಾ ಸಾಂದರ್ಭಿಕ ಹಿನ್ನಲೆಯಲ್ಲಿ ಆಡಿರಬೇಕೆಂದು ಆ ವಚನಗಳನ್ನು ವ್ಯವಸ್ಥಿತವಾಗಿ ಸಂಕಲಿಸಿದ ಪ್ರಯತ್ನವೇ ಶೂನ್ಯ ಸಂಪಾದನೆಯ ಉಗಮಕ್ಕೆ ಕಾರಣ. ಶೂನ್ಯ ಸಂಪಾದನೆಯ ಮುಖ್ಯ ಉದ್ದೇಶ್ಯವು ಮೂಲಸಾಮಗ್ರಿಗಳಾದ ಬಿಡಿವಚನಗಳಿಂದ ವಾಸ್ತವವಾಗಿ ನಡೆದಿರಬಹುದಾದ ಘಟನೆಗಳನ್ನು ನಾಟಕೀಯವಾಗಿ ಚಿತ್ರಿಸುವುದಾಗಿದೆ. ಮುಕ್ತಕಗಳಂತಹ ವಚನಗಳನ್ನು ಆರಿಸಿಕೊಂಡು ಅವುಗಳನ್ನು ಒಂದು ಸಂದರ್ಭದಲ್ಲಿಟ್ಟು ಉತ್ತರ ಪ್ರತ್ಯುತ್ತರವಾಗಿ ಜೋಡಿಸಿ ಮಧ್ಯೆ ಮಧ್ಯೆ ಸಂಕಲನಕಾರ ವಿಷಯ ಸ್ಪಷ್ಟತೆಗಾಗಿ ತನ್ನ ಮಾತುಗಳನ್ನು ಸೇರಿಸಿ ನಾಟಕೀಯ ಸನ್ನಿವೇಶಗಳನ್ನು ಚಿತ್ರಿಸಿರುವುದು ಶೂನ್ಯಸಂಪಾದನೆಗೆ ಒಂದು ಸ್ವತಂತ್ರ ಗ್ರಂಥದ ಸ್ಥಾನವನ್ನು ತಂದಿವೆ. ವಚನಕಾರರನ್ನು ಅವರು ಎದುರಿಸಿದ ಸನ್ನಿವೇಶ ಮತ್ತು ಅಲ್ಲಿ ವ್ಯಕ್ತವಾಗುವ ಅವರ ಗುಣ ಸ್ವಭಾವಗಳನ್ನು ಅವರು ಪಡೆದ ಶೂನ್ಯದ ಲಾಭವನ್ನು ಅವರವರ ಮಾತುಗಳ ಮೂಲಕವಾಗಿಯೇ ಹೊಮ್ಮಿಸಿರುವ ಒಂದು ಅಪೂರ್ವಗ್ರಂಥ. ವಚನಗಳನ್ನು ಸಂಭಾಷಣೆಯ ರೀತಿಯಲ್ಲಿ ಜೋಡಿಸಿರುವ ಶೂನ್ಯ ಸಂಪಾದನೆಗಳು ಒಂದು ರೀತಿಯಲ್ಲಿ ಮರು ಓದಿನಿಂದ ಸೃಷ್ಟಿಯಾಗಿವೆ. ಶೂನ್ಯಸಂಪಾದನೆಗಳ ಸೃಷ್ಟಿಗೆ ಶರಣರು, ಅವರ ವಚನಗಳೇ ಆಕರವಾಗಿದ್ದು, ಶೂನ್ಯಸಂಪಾದನೆಗಳು ಸಿದ್ಧವಚನಗಳನ್ನು ಬಳಸಿಕೊಂಡು ಸಂವಾದರೂಪದಲ್ಲಿ ಹೆಣೆದ ಹೊಸರೀತಿಯ ಪಠ್ಯಗಳು ಎಂದು ವಿದ್ವಾಂಸ ರಿಂದ ಕರೆಯಿಸಿಕೊಂಡಿವೆ. ಮಾನವನ ಬದುಕಿಗೆ ಮೂಲವಾಗಿ ಬೇಕಾಗಿರುವ ಆಧ್ಯಾತ್ಮದ ತಿರುಳನ್ನು ತಿಳಿಸಿಕೊಟ್ಟಿವೆ. ಶೂನ್ಯಸಂಪಾದನೆ ಆಧುನಿಕ ಮೌಲ್ಯಗಳ ಅರ್ಥದಲ್ಲಿ ಸಂವಾದವನ್ನು ಒಳಗೊಂಡಿರುವ ಪಠ್ಯವಲ್ಲ. 500 ವರ್ಷಗಳ ಹಿಂದೆ ಸಂವಾದರೂಪದ ರಚನೆಯನ್ನು ಕಲ್ಪಿಸಿಕೊಂಡ ಇವು ಅಪೂರ್ವ ಸಾಂಸ್ಕೃತಿಕ ಪಠ್ಯವೆಂದು ಆಧುನಿಕ ವಿದ್ವಾಂಸರಿಂದ ಗುರುತಿಸಲ್ಪಟ್ಟಿವೆ. ವಚನಕಾರರ ಜೀವನ ಹಾಗೂ ವಚನಗಳ ಮೂಲಕ ಸಾಂಸ್ಕೃತಿಕ ವಿದ್ಯಮಾನವಾಗಿ ಪರಿಣಮಿಸಿರುವ ಶೂನ್ಯ ಸಂಪಾದನೆಗಳು ಇಂದಿಗೂ ತನ್ನ ಮಹತ್ತರತೆಯನ್ನು ಕಾಯ್ದುಕೊಂಡಿವೆ. ಮುಕ್ತರ ಮಾರ್ಗ ವಚನಗಳನ್ನು ಉತ್ತರ-ಪ್ರತ್ಯುತ್ತರ ಸಂಬಂಧವಾಗಿ ಸೇರಿಸಿ, ಮರ್ತ್ಯಲೋಕದ ಮಹಾಗಣಂಗಳಿಗೆ ಮಹಾಪ್ರಸಂಗಮಂ ಮಾಡಿಕೊಡುವಂತಹ ಈ ಕೆಲಸವು ನಿಜವಾಗಿಯೂ ಒಂದು ಸೃಜಲಶೀಲ ಸಾಹಿತ್ಯದಷ್ಟೇ ಸವಾಲಿನದಾಗಿ ತ್ತು. ಇದಕ್ಕೆ ಇದ್ದ ಅನುಕೂಲವೆಂದರೆ ವಚನಗಳ ಮುಕ್ತಕ ಸ್ವರೂಪ. ಒಂದು ಅರ್ಥ ದಲ್ಲಿ ಬಂಧನಕ್ಕೆ ಸಿಗದೆ ಬಹುಮುಖಿಯಾಗಿಯೂ ಸ್ವತಂತ್ರವಾಗಿಯೂ ಉಳಿಯುವ ವಚನಗಳ ಸ್ವಾಯತ್ತ ಸ್ವರೂಪದ ಅನುಕೂಲವೆ ಶೂನ್ಯಸಂಪಾದನೆಯ ಸೃಷ್ಟಿಗೆ ಅನುಕೂಲವಾಗಿದೆ. ಗತಕಾಲದ ಸಾಧನೆಯನ್ನು ಅದರ ಗ್ರಹಿಕೆಯೊಂದಿಗೆಯೂ ವರ್ತಮಾನದ ಸಾಧನೆಯನ್ನು ಅದರ ಮಿತಿಗಳೊಂದಿಗೂ ಸಂವಾದಮಾಡುವವ ರಿಗೆ ಶೂನ್ಯಸಂಪಾದನೆ ಖಂಡಿತವಾಗಿಯೂ ಪ್ರೇರೇಪಿಸುತ್ತವೆ.

Downloads

Published

05.01.2024

How to Cite

C. NAGABHUSHAN. (2024). ತುಮಕೂರು ಪರಿಸರದ ಶೂನ್ಯ ಸಂಪಾದನೆಗಳು: ಒಂದು ಅವಲೋಕನ. AKSHARASURYA, 3(01), 20–39. Retrieved from http://aksharasurya.com/index.php/latest/article/view/293

Issue

Section

ಕಾಲುದಾರಿ. | BYWAY.