ಕಲ್ಯಾಣ ಕರ್ನಾಟಕ ಜನಪದ ಸಾಹಿತ್ಯದ ಭಗೀರಥ: ಡಾ. ಮಲ್ಲಿಕಾರ್ಜುನ ಲಠ್ಠೆ

Authors

  • SHIVRAJ SHAMARAVA

Keywords:

ಕಲ್ಯಾಣ ಕರ್ನಾಟಕ, ಜನಪದ ಸಾಹಿತ್ಯ, ಶರಣ ಸಾಹಿತ್ಯ, ಉತ್ತರ ಕರ್ನಾಟಕ, ಒಡಪುಗಳು, ನುಡಿಗಟ್ಟು

Abstract

ಸಮಾಜದಲ್ಲಿ ಘಟಿಸಿದ ಸತ್ಕಾರಗಳ ‘ದಾಖಲೆ’ ಸಮಾಜವನ್ನುದ್ಧರಿಸಿದ ಪುಣ್ಯಪುರುಷರ ಚರಿತ್ರೆಗಳು ಮುಂದಿನ ಪೀಳಿಗೆಗೆ ದಾರಿ ದೀಪವೂ ಹೌದು; ತೋರು ಬೆರಳೂ ಹೌದು. ಕಾರಣ ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಕಟ್ಟಿ ಬೆಳೆಸಿದ, ಸಮಾಜಕ್ಕಾಗಿ ದುಡಿದ ಮಹಾತ್ಮರ ಚರಿತ್ರೆಗಳನ್ನು ತಿಳಿದುಕೊಳ್ಳುವುದು ಅತಿ ಅವಶ್ಯಕವೆನಿಸುತ್ತದೆ. ಅದರಂತೆ ಕಲ್ಯಾಣ ಕರ್ನಾಟಕದ ಜನಪದ ಸಾಹಿತ್ಯವನ್ನು ಹಳ್ಳಿಹಳ್ಳಿಗೆ ಹೋಗಿ ಸಂಗ್ರಹ ಮಾಡಿ ಪ್ರಕಟಿಸುವ ಮೂಲಕ ನಮ್ಮ ನಾಡಿನ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸಿದವರಲ್ಲಿ ಡಾ. ಎಮ್.ಎಸ್. ಲಠ್ಠೆ ಒಬ್ಬರು. ಸರಳ, ಸಜ್ಜನಿಕೆ, ಕರ್ತವ್ಯ ನಿಷ್ಠತೆಗೆ ಇನ್ನೊಂದು ಹೆಸರೇ ಡಾ. ಎಂ. ಎಸ್. ಲಠ್ಠೆ. ಅವರು ವಿದ್ಯಾರ್ಥಿಪ್ರೇಮಿ ಶಿಕ್ಷಕರಾಗಿ, ನೂರಾರು ಜನ ಸ್ನೇಹಿತರನ್ನು ಸಂಪಾದಿಸಿಕೊಂಡು ಸ್ನೇಹಜೀವಿಯಾಗಿ ಬದುಕಿದವರು. ಶರಣ ಸಾಹಿತ್ಯ ಮತ್ತು ಜನಪದ ಸಾಹಿತ್ಯದಲ್ಲಿ ಅಪಾರವಾದ ಕೆಲಸ ಮಾಡಿದವರು. ಅವರು ಬರೆದ, ಸಂಪಾದಿಸಿದ ಒಟ್ಟು ಕೃತಿಗಳ ಸಂಖ್ಯೆ ಒಂದು ನೂರು ದಾಟುತ್ತದೆ. ಕಲ್ಯಾಣ ಕರ್ನಾಟಕ ಜನಪದ ಸಾಹಿತ್ಯದ ಭಗೀರಥ ಡಾ. ಮಲ್ಲಿಕಾರ್ಜುನ ಲಠ್ಠೆ ಅವರ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಎಂದೇ ಹೇಳಬಹುದು. ಅವರ ಪರಿಚಯ ಕುರಿತ ಲೇಖನ ಇದಾಗಿದೆ.

Downloads

Published

05.12.2023

How to Cite

SHIVRAJ SHAMARAVA. (2023). ಕಲ್ಯಾಣ ಕರ್ನಾಟಕ ಜನಪದ ಸಾಹಿತ್ಯದ ಭಗೀರಥ: ಡಾ. ಮಲ್ಲಿಕಾರ್ಜುನ ಲಠ್ಠೆ. AKSHARASURYA, 2(13), 166–175. Retrieved from http://aksharasurya.com/index.php/latest/article/view/291

Issue

Section

ಪ್ರಬಂಧ. | ESSAY.