ಕನ್ನಡ ಸಾಹಿತ್ಯದಲ್ಲಿ ಭಾಷಾಂತರ
Keywords:
ವ್ಯಾಖ್ಯಾನ, ಭಾಷಾಂತರ, ಪರಂಪರೆ, ಹಳಗನ್ನಡ, ಕವಿತೆ, ನಾಟಕ, ಕಾದಂಬರಿ, ಅನುವಾದAbstract
ಭಾಷಾಂತರ ಎಂಬುದು ಒಂದು ಭಾಷೆಯಲ್ಲಿನ ಮಾತು ಅಥವಾ ಬರವಣಿಗೆಯನ್ನು ಇನ್ನೊಂದು ಭಾಷೆಗೆ ಸಮಾನ ಅರ್ಥ ನೀಡುವಂತೆ ಪರಿವರ್ತಿಸುವ ಪ್ರಕ್ರಿಯೆ. ಒಟ್ಟಾರೆ ಭಾಷಾಂತರ ಮೂಲ ಸೃಷ್ಟಿಯ ಪುನರ್ ಸೃಷ್ಟಿ. ಅನುವಾದಕನ ಸೃಜನಶೀಲತೆಗೆ ಸವಾಲಾಗಿದೆ. ಹಳಗನ್ನಡ ಕವಿಗಳು ಸಂಸ್ಕೃತ ಮತ್ತು ಪ್ರಾಕೃತಗಳಿಂದ ವಸ್ತುವನ್ನು ಸ್ವೀಕರಿಸುತ್ತಿದ್ದರೆಂಬ ಕಾರಣದಿಂದ ಅವರ ಕೃತಿಗಳನ್ನು ಭಾಷಾಂತರ ಎನ್ನಬಹುದು. ಆದರೆ ನಿಜವಾದ ಅರ್ಥದಲ್ಲಿ ಪ್ರಾಚೀನ ಕನ್ನಡ ಕಾವ್ಯಗಳನ್ನು ಬರಿಯ ಭಾಷಾಂತರಗಳೆನ್ನದೆ ಸರಳಾನುವಾದದ ಸ್ವತಂತ್ರ ಕೃತಿಗಳೆಂದೇ ಪರಿಗಣಿಸಬಹುದಾಗಿದೆ. ಹೊಸಗನ್ನಡ ಕಾವ್ಯಗಳ ಭಾಷಾಂತರದಲ್ಲಿ ಪಾಶ್ಚಿಮಾತ್ಯರ ಕಾವ್ಯದ ಪ್ರಭಾವ ಹೆಚ್ಚಾಗಿದೆ. ಉಳಿದ ಸಾಹಿತ್ಯ ಪ್ರಕಾರಗಳೂ ಸಹ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ಪರಸ್ಪರ ಪ್ರಭಾವ ಪಡೆದಿವೆ.