ಭಾಷಾ ಕಲಿಕೆ ಮತ್ತು ಬೋಧನೆಯ ಮನೋವೈಜ್ಞಾನಿಕ ನಿಯಮಗಳು
Keywords:
ಸ್ಟುರ್ಟೆವಾಂಟ್, ಹಾಕೆಟ್, ಯಾದೃಚ್ಛಿಕತೆ, ಸ್ಖಾಲಿತ್ಯ, ಲೀಬ್ನಿಜ್, ಶಾಬ್ಧಿಕ, ಮನೋವೈಜ್ಞಾನಿಕ, ಧ್ವನ್ಯಾಂಗAbstract
ಭಾಷೆಯನ್ನು ಬೆಳಕು, ಜ್ಯೋತಿ ಎನ್ನುತ್ತಾರೆ. ಅಲ್ಲಮನು ತನ್ನ ವಚನವೊಂದರಲ್ಲಿ “ಮಾತೆಂಬುದು ಜ್ಯೋತಿರ್ಲಿಂಗ” ಎಂದಿದ್ದಾರೆ. ಭಾಷೆ ಇಲ್ಲದಿದ್ದರೆ ನಮ್ಮ ಜೀವನ ಕತ್ತಲಲ್ಲಿ ತುಂಬಿರುತ್ತಿತ್ತು. ಆದ್ದರಿಂದಲೇ ದಂಡಿ ಎಂಬ ದಾರ್ಶನಿಕ ಭಾಷೆ ಇಲ್ಲದಿದ್ದರೆ ಜಗತ್ತೇ ಕತ್ತಲೆಯಿಂದ ತುಂಬಿರುತ್ತಿತ್ತೆಂದು ಹೇಳಿದ್ದಾನೆ. ಮನುಷ್ಯನ ವ್ಯವಹಾರ ಆಲೋಚನೆ, ಭಾವನೆಗಳ ಅಭಿವ್ಯಕ್ತಿ-ಇವೆಲ್ಲವೂ ಸಾಧ್ಯವಾಗಿರುವುದು ಭಾಷೆಯಲ್ಲಿ, ಭಾಷೆಯು ಅಭಿವ್ಯಕ್ತಿಯ ಒಂದು ಶಸಕ್ತವಾದ ಶಾಬ್ಧಿಕ ಮಾಧ್ಯಮ. ಮನುಷ್ಯರು ತಮ್ಮ ಬುದ್ಧಿಶಕ್ತಿಯಿಂದ ಭಾಷೆಯನ್ನು ರೂಢಿಸಿಕೊಂಡಿದ್ದಾರೆ. ಭಾಷೆ ಎಂಬುದು ನಿಸರ್ಗದತ್ತವಾದ, ಸಹಜವಾದ ಸ್ವಾಭಾವಿಕ ಕ್ರಿಯೆಯಲ್ಲ. ಒಂದು ನಿರ್ದಿಷ್ಟವಾದ ಪರಿಸರದಲ್ಲಿ ಬಾಲ್ಯದಿಂದ ಕಲಿಯುವುದರಿಂದ ಭಾಷೆ ಬರುತದೆಯೇ ಹೊರತು, ಹುಟ್ಟಿ ನೋಡನೆ ಬರುವುದಿಲ್ಲ. ಭಾಷೆಯು ವ್ಯಕ್ತಿ, ಕುಟುಂಬ, ಸಮುದಾಯ, ಸಮಾಜ ಅಥವಾ ನಿರ್ದಿಷ್ಟ ಪ್ರದೇಶಗಳಲ್ಲಿ, ನಿರ್ದಿಷ್ಟ ಪರಿಸರದಲ್ಲಿ ಪರಸ್ಪರ ಒಪ್ಪಿಗೆ ಮತ್ತು ರೂಢಿಯಿಂದ ಬಂದ ಒಂದು ವ್ಯವಸ್ಥೆಯಾಗಿದೆ.