ತಾಯಿ ಎಂಬ ಹೆಣ್ಣು
Keywords:
ತಾಯಿ, ಹೆಣ್ಣು, ವಾತ್ಸಲ್ಯ, ಪ್ರೀತಿ, ಜಗತ್ತಿನ ಶಕ್ತಿ, ಅಸ್ತಿತ್ವ, ಅಸಹಾಯಕತೆAbstract
ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ಮೌಲ್ಯ ಎಂದರೆ ಅದು ‘ತಾಯಿ’ ಎನ್ನುವ ಪದ ಮಾತ್ರ. ಈ ಕಥಾ ಭಾಗವು ಹೆಣ್ಣಿನ ಬಗೆಗೆ ನಾನಾ ವಿಚಾರಗಳನ್ನು ತಿಳಿಸಿಕೊಟ್ಟರು ಸಹ ಪ್ರಮುಖವಾಗಿ ಕಂಡದ್ದು ತಾಯಿಯ ವಾತ್ಸಲ್ಯ ಮತ್ತು ಪ್ರೀತಿಯ ಗುಣಗಳು. ಹೆಣ್ಣು ಜನಿಸಿದಾಗಿನಿಂದ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ. ಅದರಲ್ಲಿ ಪ್ರಮುಖವಾದುದು ತಾಯಿಯ ಪಾತ್ರ. ಜಗತ್ತಿನ ಯಾವುದೇ ಸೃಷ್ಟಿ ಹೆಣ್ಣಿನಿಂದಲೇ ಆಗಬೇಕು ಎಂಬುದು ಮನವರಿಕೆಯಾಗುತ್ತದೆ. ತನ್ನ ಮಕ್ಕಳನ್ನು ತಾಯಿಯಾದವಳು ಸಂಕಷ್ಟದ ಸಮಯದಲ್ಲಿ ಪಾರು ಮಾಡುವಳು ಅದಕ್ಕಾಗಿ ತಾನು ಯಾವ ತ್ಯಾಗಕ್ಕೂ ಸಿದ್ಧರಿವಳು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಈ ಕಥಾ ಭಾಗದಲ್ಲಿ ದೌರ್ಜನ್ಯ, ಶೋಷಣೆ, ಪುರುಷ ಪ್ರಧಾನ ವ್ಯವಸ್ಥೆಯ ಕರಾಳ ಮುಖಗಳು ಕಂಡು ಬಂದರೂ ಸಹ ಇದರ ನಡುವೆ ಮಮತೆಯ, ಪ್ರೀತಿಯ ಗುಣಗಳನ್ನು ಜಗತ್ತಿಗೆ ಸಾರಿದ ತಾಯೆಂಬ ಹೆಣ್ಣಿನ ಪಾತ್ರವು ಮುಖ್ಯವಾಗಿ ಕಾಣಬರುತ್ತದೆ. ಗಂಡನಾದವನು ತನ್ನನ್ನು ದೂರ ತಳ್ಳಿದಾಗಲು ತನ್ನ ಮಕ್ಕಳಿಗಾಗಿ ತಾನು ಆದರ್ಶ ತಾಯಿಯಾಗಿ ನಿಲ್ಲಲು ಪ್ರಯತ್ನಿಸುವ ಪ್ರಸಂಗ ಕಣ್ಕಟ್ಟುತ್ತದೆ. ಸಮಾಜದಲ್ಲಿ ಗಂಡಿನ ಪರವಾಗಿ ಎಲ್ಲಾ ವಿಚಾರಗಳನ್ನು ಬರೆದುಕೊಂಡಿರುವಾಗ ತನ್ನ ಮತ್ತು ತನ್ನ ಮಕ್ಕಳ ಪರವಾಗಿ ನಿಲ್ಲುವ ಶಕ್ತಿ ತಾಯಿ ಮಾತ್ರ ಎಂಬುದನ್ನು ತಿಳಿಸಿಕೊಡುತ್ತದೆ. ಕಥೆ ಸಣ್ಣದಾದರೂ ಸಹ ಇಡೀ ಜಗತ್ತನ್ನು ಸೃಷ್ಟಿಸಿ, ನಿರ್ಮಿಸಿ ಅದನ್ನು ಪೋಷಿಸುತ್ತಿರುವ ತಾಯಿಯ ತ್ಯಾಗ, ಪ್ರೀತಿ, ವಾತ್ಸಲ್ಯ, ಮಮತೆಯ ಬಗೆಗೆ ಒಂದು ಹೊಸ ಸಂದೇಶವನ್ನು ಈ ಕಥಾ ಭಾಗ ನಿರೂಪಿಸುತ್ತದೆ.