ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ-ಭರತೇಶ ವೈಭವ
Keywords:
ಭರತ, ಚಕ್ರರತ್ನ, ಯುದ್ಧ, ಬಾಹುಬಲಿ, ಜೈನ, ಮುಕ್ತಿ, ಸಾಂಗತ್ಯAbstract
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಾಯಕರನ್ನು ಉನ್ನತೀಕರಿಸಿದ ಕೃತಿಗಳು, ಪ್ರತಿ ನಾಯಕರನ್ನು ಉದಾತ್ತೀಕರಿಸಿದ ಸಾಹಿತ್ಯ ಕೃತಿಗಳಿಗೇನೂ ಕಡಿಮೆಯಿಲ್ಲದಂತೆ ಕಾಣುತ್ತೇವೆ. ಆದರೆ ಪ್ರತಿ ನಾಯಕನನ್ನು ನಾಯಕನನ್ನಾಗಿ ಚಿತ್ರಿಸಿದ ಕೃತಿ ಸಿಗುವುದಾದರೆ, ಇದೊಂದೇ ಎನ್ನುವಷ್ಟರ ಎತ್ತರಕ್ಕೆ ಭರತನನ್ನು ಎತ್ತರಿಸಿ ಸಾಹಿತ್ಯ ಕೃತಿಯನ್ನು ರಚಿಸಿದವರಲ್ಲಿ ರತ್ನಾಕರನೇ ಮೊದಲಿಗನಾಗುತ್ತಾನೆ. ಹಾಗೆಯೇ ಧರ್ಮವನ್ನು, ಕಾಲವನ್ನು, ಚಿಂತನೆಯನ್ನು, ಸಾಹಿತ್ಯ ರೂಪವನ್ನು, ಶೈಲಿಯನ್ನು ಹೊಸಬಗೆಯಲ್ಲಿ ನೋಡಿದ ಕೃತಿ ನಮಗೆ ದೊರಕುವುದು ಇದೊಂದೇ, ಭರತೇಶವೈಭವ.