ಗೊರೂರರ ಬೂತಯ್ಯನ ಮಗ ಅಯ್ಯು: ಪ್ರಸ್ತುತತೆ

Authors

  • SHIVARAJU N.

Keywords:

ವ್ಯವಸ್ಥೆ, ರಾಕ್ಷಸ, ವೈಚಾರಿಕತೆ, ಜಮೀನ್ದಾರ, ರೈತ, ಸಾಲ, ಜೀತ, ಗದ್ದೆ, ಸಿನಿಮಾ, ಚಿತ್ರಕಥೆ

Abstract

ಸಾಹಿತ್ಯ ಪ್ರಕಾರಗಳಲ್ಲಿ ಸಣ್ಣ ಕಥೆ ಜನಪ್ರಿಯ ಸಾಹಿತ್ಯ ಪ್ರಕಾರ. ಈ ಮಾತು ಕನ್ನಡ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗದೇ ಪ್ರಪಂಚದ ಯಾವುದೇ ಭಾಷೆಯ ಸಾಹಿತ್ಯಕ್ಕೂ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ. ಕನಿಷ್ಠ 130 ವರ್ಷಗಳ ಇತಿಹಾಸವಿರುವ ಹೊಸಗನ್ನಡ ಕಥಾ ಸಾಹಿತ್ಯದಲ್ಲಿ ಓದಲೇಬೇಕಾದ ಕಥೆಗಳ ಪೈಕಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ‘ಬೂತಯ್ಯನ ಮಗ ಅಯ್ಯು’ ಕಥೆಯೂ ಒಂದು. ಸಾಹಿತ್ಯದ ವಿದ್ಯಾರ್ಥಿಗಳು ಕಡ್ಡಾಯವಾಗಿ ಓದಲೇಬೇಕಾದ ಕಥೆ ಇದು. ಪ್ರತಿಯೊಬ್ಬ ಕನ್ನಡಿಗನೂ ವರ್ಷಕ್ಕೆ ಒಂದು ಬಾರಿಯಾದರೂ ಓದಲೇಬೇಕಾದ ಕಥೆ ಇದು. ಈ ಕಥೆಯಲ್ಲಿ ನೂರು ವರ್ಷಗಳ ಹಿಂದಿನ ಗ್ರಾಮ ಭಾರತದ ಚಿತ್ರಣವನ್ನು ಕಾಣಬಹುದು. ಕನ್ನಡ ಕಥನ ಸಾಹಿತ್ಯವು ಭಾಗಶಃ ಗ್ರಾಮೀಣ ಬದುಕನ್ನು ಅನುಲಕ್ಷಿಸಿ ರಚನೆಯಾಗಿದ್ದರೂ ಸಹ, ಗ್ರಾಮೀಣ ಬದುಕನ್ನು ಅನುಲಕ್ಷಿಸಿ ಕಥಾ ಸಾಹಿತ್ಯ ರಚನೆ ಮಾಡಿದವರಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರು, ಡಾ. ಬೆಸಗರಹಳ್ಳಿ ರಾಮಣ್ಣ, ಕುವೆಂಪು ವಿಭಿನ್ನರಾಗಿ ನಿಲ್ಲುತ್ತಾರೆ. ಪ್ರಸ್ತುತ ‘ಬೂತಯ್ಯನ ಮಗ ಅಯ್ಯು’ ಕಥೆಯಲ್ಲಿ ಜೀತಗಾರನೊಬ್ಬ ಜಮೀನುದಾರರಿಗೆ ಎದುರಾಗಿ ನಿಲ್ಲುವ ಚಿತ್ರಣವನ್ನು ಕಾಣಬಹುದು. ಪ್ರಕೃತಿ ಹಾಗೂ ಮಾನವ ಜಗತ್ತಿನಲ್ಲಿ ಒಂದು ಬಗೆಯ ಕೋಲಾಹಲ ಉಂಟಾಗಿ ಕಡೆಗೆ ಶಾಂತಿಯುಂಟಾಗುವ ಅನುಭವವನ್ನು ಕಥೆ ತಂದುಕೊಡುತ್ತದೆ. ನವೋದಯದ ಇತರ ಕಥೆಗಳಿಗೆ ಹೋಲಿಸಿದರೆ ಗಾತ್ರ, ಪಾತ್ರ, ಸಂಘರ್ಷದ ನೆಲೆಯಲ್ಲಿ ಈ ಕಥೆ ವಿಶಿಷ್ಟವೆನಿಸುತ್ತದೆ. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಜಮೀನ್ದಾರರನ್ನು ಕುರಿತು ಜನರಲ್ಲಿ ಋಣಾತ್ಮಕ ಭಾವನೆಗಳಿದ್ದವು. ಜಮೀನ್ದಾರರೆಲ್ಲ ಕೆಟ್ಟವರೆಲ್ಲ, ಅವರಲ್ಲೂ ಒಳ್ಳೆಯ ವ್ಯಕ್ತಿತ್ವದ ಜಮೀನ್ದಾರರುಗಳಿರುತ್ತಾರೆ ಎಂಬ ವಿಚಾರವನ್ನು ಅಯ್ಯುವಿನ ಪಾತ್ರದ ಮೂಲಕ ಚಿತ್ರಿಸಿದ್ದಾರೆ. ಕಥೆಯ ಉತ್ತರಾರ್ಧವು ಅಯ್ಯುವಿನ ವ್ಯಕ್ತಿತ್ವದ ವಿಶ್ಲೇಷಣೆಗೆ ಮೀಸಲಾಗಿದೆ. ಸಿನಿಮಾದಲ್ಲಿ ಅಯ್ಯುವಿನ ಪಾತ್ರ ನಿರ್ವಹಿಸಿರುವು ಲೋಕೇಶ್ ಅವರ ಅಭಿನಯ ಮನೋಜ್ಞವಾಗಿದೆ.

Downloads

Published

05.12.2023

How to Cite

SHIVARAJU N. (2023). ಗೊರೂರರ ಬೂತಯ್ಯನ ಮಗ ಅಯ್ಯು: ಪ್ರಸ್ತುತತೆ. AKSHARASURYA, 2(13), 111–119. Retrieved from http://aksharasurya.com/index.php/latest/article/view/284

Issue

Section

ಪುಸ್ತಕ ವಿಮರ್ಶೆ. | BOOK REVIEW.