ಮೌಲ್ಯ ಸಾಹಿತ್ಯದ ಹಿರಿಮೆ-ಗರಿಮೆ

Authors

  • H.M. Mallikarjuna

Abstract

ಪ್ರಾರಂಭದ ಶರಣರ ಚಳುವಳಿಯಿಂದ ದಾಸ ಸಾಹಿತ್ಯವನ್ನೊಳಗೊಂಡು ಮುಂದುವರೆದು ಬೆಳೆದ ತತ್ವಸಾಹಿತ್ಯದವರೆಗೆ ಕಾಯಕಪ್ರಜ್ಞೆ, ಭಕ್ತಿಯ ಆರಾಧನೆ, ಅಂತರಂಗ ಬಹಿರಂಗಶುದ್ಧಿಯ ಚಿಂತನೆ, ಎಂಥಹದ್ದೇ ಕಠಿಣ ಸಂದರ್ಭದಲ್ಲಿಯೂ ಜೀವಕಾಳಜಿಯನ್ನು ಮರೆಯದೇ, ಜೀವನ ಪ್ರೀತಿಯನ್ನು ಪ್ರತಿಪಾದಿಸಿರುವುದು ಮೆಚ್ಚತಕ್ಕ ಸಂಗತಿಯಾಗಿದೆ. ಅದಲ್ಲದೇ ಸತ್ಯಶುದ್ಧ ಮಾರ್ಗದ ಪ್ರತಿಪಾದನೆಯೇ ಅಲ್ಲೆಲ್ಲಾ ನಡೆದಿರುವುದು ಸರ್ವವಿಧಿತ. ಈ ಮಾದರಿಯ ಸಾಹಿತ್ಯದ ಸಿರಿಯಿಂದಲೇ ಕನ್ನಡದ ಇಂದಿನ ಸಾಹಿತ್ಯ ಪ್ರಿಯರು ಕಲಿಯಬೇಕಾದ ಮೌಲ್ಯಗಳು ಸಾಕಷ್ಟಿವೆ. ಬದುಕಿನಲ್ಲಿ ಭರವಸೆಯ ಅಲೆಯನ್ನು ಮೂಡಿಸಬಲ್ಲ ಇಂತಹ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಾವಿಕರು ನಾವಾದರೆ ಕನ್ನಡ ಸಾಹಿತ್ಯಕ್ಕೆ ಕಿಂಚಿತ್ತದಾರೂ ಸೇವೆಸಲ್ಲಿಸಿದ ಸುಯೋಗ ಖಂಡಿತವಾಗಿ ನಮ್ಮದಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸುತ್ತೇನೆ.

References

ಡಾ. ಎಲ್. ಬಸವರಾಜು(ಸಂ) : ಸರ್ವಜ್ಞನ ವಚನಗಳು, ಸಪ್ನ ಬುಕ್ ಹೌಸ್ ಬೆಂಗಳೂರು ೨೦೧೨

ಡಾ. ಎಂ.ಎಂ. ಕಲಬುರ್ಗಿ (ಪ್ರ.ಸಂ) : ಬಸವಯುಗದ ವಚನ ಮಹಾಸಂಪುಟ : ೧, ಕನ್ನಡ ಪುಸ್ತಕ ಪ್ರಾಧಿಕಾರ, ೨೦೧೬

ಎಚ್.ಎಸ್. ವೆಂಕಟೇಶ ಮೂರ್ತಿ : ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂಪುಟ ೮, ಕೀರ್ತನಾಕಾರರು, ಸಪ್ನ ಬುಕ್ ಹೌಸ್ ಬೆಂಗಳೂರು, ೨೦೧೮

ಡಾ. ಹೆಚ್.ಟಿ. ಶೈಲಜ (ಸಂ) : ಡಾ. ಎಚ್. ತಿಪ್ಪೇರುದ್ರಸ್ವಾಮಿ ಸಮಗ್ರ ಸಾಹಿತ್ಯ ಮಾಲೆ-೯, ವಿಮರ್ಶ ಸಾಹಿತ್ಯ -೧ ತಾತ್ವಿಕ ವಿಮರ್ಶೆ, ಕನ್ನಡದಲ್ಲಿ ಕೈವಲ್ಯ ಸಾಹಿತ್ಯ, ಭಾರತೀ ಪ್ರಕಾಶನ ಮೈಸೂರು, ೨೦೧೮

Downloads

Published

05.01.2023

How to Cite

H.M. Mallikarjuna. (2023). ಮೌಲ್ಯ ಸಾಹಿತ್ಯದ ಹಿರಿಮೆ-ಗರಿಮೆ. AKSHARASURYA, 2(01), 11 to 14. Retrieved from http://aksharasurya.com/index.php/latest/article/view/28

Issue

Section

Article