ಭಾರತದ ‘ಪಾದ’ ತೋರಬಹುದಾದ ‘ದೀಪ’: ಬಾಬಾಸಾಹೇಬ್ ಅಂಬೇಡ್ಕರ್
Keywords:
ಮಹಾನ್ ಮಾನವತಾವಾದಿ, ಬಾಬಾಸಾಹೇಬ್ ಅಂಬೇಡ್ಕರ್, ಅಸ್ಪೃಶ್ಯ, ಅವಮಾನಿತ ಜಾತಿ, ಕುಲಮೀಮಾಂಸೆ, ವಿಮೋಚಕAbstract
ಅಂಬೇಡ್ಕರ್ ಅಸ್ಪೃಶ್ಯ ಮತ್ತು ಅವಮಾನಿತ ಜಾತಿಗಳ ವಿಮೋಚಕ. ಕುಲಮೀಮಾಂಸೆಯ ಕುಲಪುರುಷ. ಭಾರತೀಯ ಸಮಾಜಶಾಸ್ತ್ರದ ಪಿತಾಮಹ. ರಾಜಕೀಯ ವಿಜ್ಞಾನಿ. ಪ್ರಾಚೀನ ಭಾರತದ ಸಾಂಸ್ಕೃತಿಕ ಉತ್ಖನನಕಾರ. ಅರ್ಥಶಾಸ್ತ್ರಜ್ಞ. ಸಂವಿಧಾನಕ್ಕೆ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತೆಗಳ ಮಾನವ ಘನತೆ ತೋರಿದ ಮಹಾನ್ ಮಾನವತಾವಾದಿ. ಸಾಮಾಜಿಕ ರಾಜಕೀಯ ಹೋರಾಟಗಳ ನೇತಾರ. ಧರ್ಮ, ಸಂವಿಧಾನಗಳ ಮರು ಸಂಸ್ಥಾಪಕ. ಹೀಗೆ ಹೇಳುತ್ತಾ ಹೋದರೆ ಈ ಪಟ್ಟಿ ಬೆಳೆಯುತ್ತಾ ಹೋಗಬಲ್ಲದು. ಬಹುಶಃ ಭಾರತೀಯ ಚಿಂತಕರಲ್ಲಿ ಈ ಮಟ್ಟದ ‘ಬಹುಮುಖಿ’ ಆಯಾಮಗಳಿರುವ ಇನ್ನೊಂದು ವ್ಯಕ್ತಿತ್ವವನ್ನು ಕಾಣುವುದು ಕಷ್ಟವೇ.