ಏಣಗಿ ಬಾಳಪ್ಪನವರ ‘ನನ್ನ ಬಣ್ಣದ ಬದುಕು’ ಆತ್ಮಕಥನಾವಲೋಕನ.

Authors

  • S. V. MANAGUNDI

Keywords:

ರಂಗಪ್ರವೇಶ, ನಾಟಕ, ನಾಟಕ ಮಂಡಳಿ, ನಾಟ್ಯ ಸಂಘ, ಭರತ, ನಾರದ

Abstract

ಕರ್ನಾಟಕದ ವೃತ್ತಿರಂಗಭೂಮಿಯ ಹಿರಿಯ ನಟರಾದ ಏಣಗಿ ಬಾಳಪ್ಪನವರ ಆತ್ಮಕಥೆ “ನನ್ನ ಬಣ್ಣದ ಬದುಕು”ನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯವು ೧೯೯೯ನೇ ವರ್ಷದಲ್ಲಿ ಪ್ರಕಟಿಸಿದ್ದು ವಿಶೇಷ. ರಂಗಕರ್ಮಿ ನಾಟ್ಯಭೂಷಣ ಏಣಗಿ ಬಾಳಪ್ಪನವರ ಆತ್ಮಕತೆಯನ್ನು ದು.ನಿಂ.ಬೆಳಗಲಿ ಅವರು ನಿರೂಪಿಸಿರುವುದು ವಿಶೇಷ. ೧೯೭೦ರ ದಶಕದ ಅವಧಿಯಲ್ಲಿ ಸುಧಾ ವಾರಪತ್ರಿಕೆಯ ಹತ್ತೊಂಬತ್ತು ಸಂಚಿಕೆಗಳಲ್ಲಿ ನಿರೂಪಿಸಿ ಕೊಟ್ಟಿರುವುದಾಗಿ ತಿಳಿದು ಬರುತ್ತದೆ. ಏಣಗಿ ಬಾಳಪ್ಪನವರ “ನನ್ನ ಬಣ್ಣದಬದುಕು” ಆತ್ಮಕಥೆಯು ಅವರ ಪರಿಪೂರ್ಣ ಆತ್ಮಕಥೆಯಾಗಿಲ್ಲ. ಬೆಳಗಲಿ ಅವರು ನೀಡಿದ ವಿವರವು ೧೯೭೧ರ ಪೂರ್ವದ ಅವಧಿಯಾಗಿದ್ದು ಅನಂತರದ ಏಣಗಿಯವರ ಬದುಕಿನ ವಿವರಗಳು ‘ಬಣ್ಣದ ಬದುಕಿನ ಚಿನ್ನದ ದಿನಗಳು’ (೨೦೦೭) ಕೃತಿಯಲ್ಲಿ ಬೆಳಕು ಕಂಡುದಾಗಿ ತಿಳಿಯುತ್ತದೆ. ಗಣೇಶ ಅಮೀನಗಡ ಅವರು ಎರಡನೇ ಆತ್ಮಕಥನದ ನಿರೂಪಣೆಯನ್ನು ಕೈಗೊಂಡಿದುದಾಗಿ ತಿಳಿಯುತ್ತದೆ. ಪ್ರಸ್ತುತ ಲೇಖನದ ‘ನನ್ನ ಬಣ್ಣದ ಬದುಕು’ ಆತ್ಮಕಥನ ಅವಲೋಕನ ಕಾರ್ಯ ಕೈಗೊಳ್ಳುವುದಾಗಿದೆ.

Downloads

Published

05.11.2023

How to Cite

S. V. MANAGUNDI. (2023). ಏಣಗಿ ಬಾಳಪ್ಪನವರ ‘ನನ್ನ ಬಣ್ಣದ ಬದುಕು’ ಆತ್ಮಕಥನಾವಲೋಕನ. AKSHARASURYA, 2(12), 142 to 154. Retrieved from http://aksharasurya.com/index.php/latest/article/view/272

Issue

Section

ಪ್ರಬಂಧ. | ESSAY.