ಚಲನಚಿತ್ರ ಮಾಧ್ಯಮ ಮತ್ತು ಭಾಷೆ ಬಳಕೆ.
Keywords:
ಚಲನಚಿತ್ರ, ಸಾಹಿತ್ಯ, ಭಾಷೆ ಬಳಕೆ, ಪ್ರದರ್ಶನ ತಂತ್ರಗಾರಿಕೆ, ಸಮೂಹ ಸಂಪರ್ಕ ಮಾಧ್ಯಮAbstract
ಕನ್ನಡ ಚಲನಚಿತ್ರಗಳು ಲಿಖಿತ ಅಥವಾ ಅಲಿಖಿತ ಸಾಹಿತ್ಯವನ್ನು ಆಧರಿಸಿ ರಚನೆಯಾಗಿವೆ. ಅನೇಕ ಪೌರಾಣಿಕ ಚಲನಚಿತ್ರಗಳು ರಚನೆಯಾಗಿವೆ. ಪುರಾಣಗಳನ್ನು ಆಧರಿಸಿ ರಚನೆಯಾದ ಹಳೆಗನ್ನಡ, ನಡುಗನ್ನಡ, ಪ್ರಗತಿಪರ, ಬಂಡಾಯ, ದಲಿತ ಸಾಹಿತ್ಯ ಕೃತಿಗಳು ಹಲವು ಚಲನಚಿತ್ರಗಳಿಗೆ ಪ್ರೇರಣೆಯಾಗಿವೆ. ಕಥಾಚಿತ್ರಗಳ ವಿಷಯಕ್ಕೆ ಬಂದಾಗಲೂ ಸಿನಿಮಾ ಸಾಹಿತ್ಯಕ್ಕೆ ಹೆಚ್ಚು ಹತ್ತಿರವಾಗುತ್ತದೆ. ಹೀಗೆ ಸಾಹಿತ್ಯದಂತಹ ಗಂಭೀರ ಮಾಧ್ಯಮದೊಂದಿಗೆ ಸಂಬಂಧವನ್ನಿಟ್ಟುಕೊಂಡು ಗಂಭೀರ ಚರ್ಚೆಗೆ ಗುರಿಯಾದ ಚಲನಚಿತ್ರಗಳನ್ನು ಸಾಹಿತ್ಯ, ಭಾಷೆಯ ಅಂತರ್ ಸಂಬಂಧದ ಹಿನ್ನೆಲೆಯಲ್ಲಿ ಚಲನಚಿತ್ರ ಮಾಧ್ಯಮ ಮತ್ತು ಭಾಷೆ ಬಳಕೆ ಅಧ್ಯಯನ ನಡೆಸುವುದು ಅಗತ್ಯವಾಗಿದೆ.