ವಚನಕಾರರ ವಚನಗಳಲ್ಲಿ ಆರ್ಥಿಕ ಚಿಂತನೆಗಳು.

Authors

  • THIIMEGOWDA B. P.
  • SUMA R.

Keywords:

ಕೋನ, ಇಳೆ, ಧನ, ಹುಸಿ, ಕೇಡು, ತನುಮನ, ಚೋರ, ಕಡವರ, ದ್ರವ್ಯ

Abstract

೨ ನೇ ಶತಮಾನವು ಅನೇಕ ಕಾರಣಗಳಿಂದಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ರಾಜಕೀಯ ಮತ್ತು ಸಂಘರ್ಷ, ಮೇಲು ಕೀಳೆಂಬ ಅಂಶಗಳಿಗೆ ಒಳಗಾಗಿದ್ದ ಕಾಲದಲ್ಲಿ ಬಂದವರು ಶಿವಶರಣರು, ಇವರು ವೀರಶೈವ ಧರ್ಮವನ್ನು ಹರಡುವುದಕ್ಕೆ ಸೀಮಿತವಾಗಿರದೇ ಧರ್ಮ ಪ್ರಚಾರದಲ್ಲಿ ಅನೇಕ ಜೀವನ ಮೌಲ್ಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ವಚನಗಳ ಮೂಲಕ ಪ್ರಚಾರಮಾಡಿದರು. ಮಾನವನ ಜೀವನ ನಿರ್ವಹಣೆಗೆ ಹಣಕಾಸು ಕೂಡ ಪ್ರಮುಖವಾದದ್ದು ಅದು ಸಮಾಜದ ಉತ್ಪಾದನೆ, ವಿನಿಮಯ ಹಂಚಿಕೆಗೆ ಸಂಬಂಧಪಟ್ಟಿದೆಯಲ್ಲದೆ, ಉದ್ಯೋಗ ಮತ್ತು ವರಮಾನಕ್ಕೂ ಆಧಾರವಾಗಿದೆ. ರಾಷ್ಟ್ರದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಆರ್ಥಿಕ ವ್ಯವಸ್ಥೆಯನ್ನು ಜಾರಿಗೆ ತರುವಂತಹ ಜವಾಬ್ದಾರಿಯನ್ನು ಕೈಗೊಂಡವರು ಶಿವಶರಣರಾಗಿದ್ದಾರೆ. ಅರ್ಥಕ್ಕೆ ನಿರ್ಣಾಯಕ ಪಾತ್ರವಿದೆ ಎಂದು ಗುರುತಿಸಿ ಅದನ್ನು ಜಾರಿಗೆ ತರಲು ಭಕ್ತಿಮಾರ್ಗವನ್ನು ಅನುಸರಿಸಿದರು. ೨೦ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್, ಮಾರ್ಷಲ್, ಹೇಗೆಲ್, ಕೇನ್ಸ್, ಗಾಂಧೀಜಿ ಇತ್ತೀಚಿನ ಅಮರ್ಥ್ಯಸೇನ್ ಪ್ರಚಾರಕ್ಕೆ ತಂದ ವಿಚಾರಗಳನ್ನು ೮೦೦ ವರ್ಷಗಳ ಹಿಂದೆಯೇ ನಮ್ಮ ಶಿವಶರಣರು ಅಳವಡಿಸಿಕೊಳ್ಳಲು ಪ್ರೇರೇಪಿಸಿದವರು.

Downloads

Published

05.11.2023

How to Cite

THIIMEGOWDA B. P., & SUMA R. (2023). ವಚನಕಾರರ ವಚನಗಳಲ್ಲಿ ಆರ್ಥಿಕ ಚಿಂತನೆಗಳು. AKSHARASURYA, 2(12), 80 to 85. Retrieved from http://aksharasurya.com/index.php/latest/article/view/266

Issue

Section

ಸಂಶೋಧನಾ ಲೇಖನಗಳು. | RESEARCH ARTICLE.