ಕನ್ನಡ ಭಾಷೆಯ ಇಂದಿನ ಸ್ಥಿತಿ-ಗತಿ.

Authors

  • MAHESH B. D.

Keywords:

ಅನಕ್ಷರಸ್ಥರು, ಮೂಢನಂಬಿಕೆ, ಸಂಘಟನೆ, ಮರ್ಯಾದೆ, ಶಾಸ್ತ್ರೀಯ ಭಾಷೆ, ಪ್ರತಿಷ್ಟಿತ, ತಲೆಮಾರು

Abstract

ಕಾವೇರಿಯಿಂದ ಗೋದಾವರಿಯ ತೀರದವರೆಗೆ ಹಬ್ಬಿದ ನಮ್ಮ ವಿಶಾಲವಾದ ಕನ್ನಡ ನಾಡು ವಸಾಹತುಶಾಹಿಯ ಆಡಳಿತ ಪರಿಣಾಮವಾಗಿ ಹರಿದು ಹಂಚಿಹೋಗಿತ್ತು. ಕನ್ನಡದ ಪ್ರಜ್ಞೆ ಮಾಯವಾಗಿದ್ದ ಕಾಲ ಘಟ್ಟದಲ್ಲಿ ಡೆಪ್ಯೂಟಿ ಚೆನ್ನಬಸಪ್ಪ, ಆಲೂರು ವೆಂಕಟರಾಯರಂಥ ಮಹನೀಯರು ನಾಡು-ನುಡಿ ಪ್ರಜ್ಞೆಯನ್ನು ಮರು ಸ್ಥಾಪಿಸಿ ಕನ್ನಡ ಸಾಂಸ್ಕೃತಿಕ ನೆಲೆಯನ್ನು ಗಟ್ಟಿಗೊಳಿದರು. ಭಾರತದ ಸ್ವತಂತ್ರ್ಯ ಮತ್ತು ಕರ್ನಾಟಕದ ಏಕೀಕರಣ ಚಳವಳಿಗಳೆರಡೂ ಏಕಕಾಲದಲ್ಲಿ ನಡೆದು ಸ್ವತಂತ್ರ್ಯ ಭಾರತದಲ್ಲಿ ೧೯೫೬ರ ನವೆಂಬರ್ ೧ರಂದು ನಮ್ಮ ಚೆಲುವ ಕನ್ನಡನಾಡು ಉದಯವಾಗಿ ಕನ್ನಡಿಗರೆಲ್ಲರೂ ಸಂಭ್ರಮ ಪಡುವಂತಾಯಿತು.

ಕನ್ನಡ ಭಾಷೆ ಅತ್ಯಂತ ಪ್ರಾಚೀನತೆ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಪಂಪ, ರನ್ನ, ಬಸವಣ್ಣ, ಹರಿಹರ, ರಾಘವಾಂಕ, ಕುಮಾರ ವ್ಯಾಸ, ದಾಸರು ಮುಂತಾದ ಪ್ರಾಚೀನ ಕವಿಗಳು ಹಾಗೂ ಕುವೆಂಪು, ಬೇಂದ್ರೆ, ಕಣವಿ, ಶಿವರುದ್ರಪ್ಪ ನಂತಹ ಆಧುನಿಕ ಕವಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಸಂವೃದ್ಧಗೊಳಿಸಿದ್ದಾರೆ. ಈ ರೀತಿಯ ಭವ್ಯ ಪರಂಪರೆಯುಳ್ಳ ಕರುನಾಡು ಅನೇಕ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕಾಲದಲ್ಲಿ ಕರ್ನಾಟಕದ ಏಕೀಕರಣದ ಕನಸು ಕಂಡವರು ಅನೇಕರು. ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ, ಉದಯವಾಗಲಿ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ಎಂದೆಲ್ಲ ನಾಡು ನುಡಿಯ ಶ್ರೇಷ್ಠತೆ ಮತ್ತು ಪಾವಿತ್ರತೆಯನ್ನು ನೀಡಿ ಹೋದರು ಇಂತ ಕನ್ನಡ ಮೂಲೆಗುಂಪಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ.

Downloads

Published

05.11.2023

How to Cite

MAHESH B. D. (2023). ಕನ್ನಡ ಭಾಷೆಯ ಇಂದಿನ ಸ್ಥಿತಿ-ಗತಿ. AKSHARASURYA, 2(12), 70 to 79. Retrieved from http://aksharasurya.com/index.php/latest/article/view/265

Issue

Section

ಸಂಶೋಧನಾ ಲೇಖನಗಳು. | RESEARCH ARTICLE.