ಕೆ. ಷರೀಫಾರವರ ಕಾವ್ಯದಲ್ಲಿ ಪ್ರತಿರೋಧದ ನೆಲೆಗಳು.
Keywords:
ಚಳುವಳಿ, ಸ್ತ್ರೀ ವಾದ, ತಳಸಮುದಾಯಗಳು, ಶೋಷಣೆ, ಸಾಂಸ್ಕೃತಿಕ ಎಚ್ಚರAbstract
ಮಹಿಳಾ ಸಾಹಿತ್ಯ ಚಳವಳಿಯು ೭೦-೮೦ರ ದಶಕದಲ್ಲಿ ಒಂದು ಹೊಸ ಮನ್ವಂತರಕ್ಕೆ ದಾರಿ ಮಾಡಿಕೊಟ್ಟಿತು. ಮಹಿಳೆಯು ಕೂಡ ಅನೇಕ ಶತಮಾನಗಳಿಂದ ಪುರುಷ ಪ್ರಧಾನ ವ್ಯವಸ್ಥೆಯ ಕಪಿಮುಷ್ಠಿಯಲ್ಲಿ ಸಿಲುಕಿ ತಮ್ಮನ್ನು ತಾವು ಕಳೆದುಕೊಂಡಿದ್ದರು. ಇದಕ್ಕೆ ಪೂರಕವಾದ ವಾತಾವರಣ ೭೦ರ ದಶಕದಲ್ಲಿ ನಿರ್ಮಾಣವಾದ್ದರಿಂದ ಮಹಿಳೆಯೂ ಕೂಡ ತನಗಾದ ಶೋಷಣೆಗಳನ್ನು ತನಗೆ ಇರುವ ಹಕ್ಕುಗಳನ್ನು ಕುರಿತು ಧ್ವನಿಯೆತ್ತಲಾರಂಭಿಸಿದಳು. ಅಂಥವರಲ್ಲಿ ಪ್ರತಿಭಾನಂದಕುಮಾರ್, ಸವಿತಾ ನಾಗಭೂಷಣ್, ಗೀತಾ ನಾಗಭೂಷಣ್, ಸಾ. ರಾ. ಅಬೂಬಕರ್, ಹೆಚ್. ಎಲ್. ಪುಷ್ಪ, ಸುಕನ್ಯಾ ಮಾರುತಿ, ಕೆ. ಆರ್. ಸಂಧ್ಯಾರೆಡ್ಡಿ, ಕೆ. ಷರೀಫಾ, ದು. ಸರಸ್ವತಿ, ಪಿ. ಚಂದ್ರಿಕಾ, ಉಷಾ ಸರ್ವಮಂಗಳ, ಆರ್. ಸುನಂದಮ್ಮ ಮೊದಲಾದವರನ್ನು ಈ ಸಾಲಿನಲ್ಲಿ ಗುರುತಿಸಬಹುದಾಗಿದೆ.