ಧ್ವನಿ ಬದಲಾವಣೆ ಮತ್ತು ಆರ್ಥಿಕ ತತ್ವ.

(ಉತ್ತರ ಕರ್ನಾಟಕ ಜಿಲ್ಲೆಗಳನ್ನು ಅನುಲಕ್ಷಿಸಿ)

Authors

  • I. B. SATIHAL

Keywords:

ನಿಲ್ಡ್ರಿ, ನಾನ್‌ಸುನೆ, ಗೂಳೆ, ರ‍್ರಾಬ, ಮಗ್ನಾ, ಕಂವಾ, ಅಡ್ಗೆಲ್ಲ, ಕಾಲ್ರ‍್ಲೆ

Abstract

ಕರ್ನಾಟಕದಲ್ಲಿ ಬಳಕೆಯಲ್ಲಿರುವ ಕನ್ನಡ ಭಾಷೆಯನ್ನು ಆಯಾ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಕನ್ನಡವನ್ನು ಧ್ವನಿ ವ್ಯತ್ಯಾಸಗಳ ಆಧಾರದ ಮೇಲೆ ಪ್ರಾದೇಶಿಕ ಉಪಭಾಷೆ ಎಂದು ಗುರುತಿಸುವ ಪದ್ಧತಿ ಸಾವಿರ ವರ್ಷಗಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಕವಿರಾಜ ಮಾರ್ಗಕಾರನ ಕಾಲದಲ್ಲಿಯೆ ಕರ್ನಾಟಕದಲ್ಲಿ ಹಲವು ಕನ್ನಡಗಳಿದ್ದವು. ಇಂದಿನಂತೆ ಅಂದೂ ಆಯಾ ಕನ್ನಡ ಪ್ರದೇಶಗಳ ಮೇಲೆ ಅನ್ಯ ಭಾಷೆಗಳ ಪ್ರಭಾವವಿತ್ತು. ಅವರು ಉಚ್ಚರಿಸುವ ಧ್ವನಿಗಳಲ್ಲಿ ವ್ಯತ್ಯಾಸವಿದ್ದರೂ ಅವು ಪರಸ್ಪರರಿಗೆ ಅರ್ಥವಾಗುತ್ತಿದ್ದವು. ಅದರಲ್ಲಿ ಶುದ್ಧ (ತಿರುಳು) ಕನ್ನಡವು ಒಕ್ಕುಂದ, ಕೊಪಣನಗರ, ಪುಲಿಗೆರೆ ಮತ್ತು ಕಿಸುವಳಲು ಪ್ರದೇಶಗಳಲ್ಲಿ ಬಳಕೆಯಲ್ಲಿತ್ತು. ಇವುಗಳಲ್ಲಿ ಕನ್ನಡ ಸಾಹಿತ್ಯ ರಚನೆಗೆ ಈ ತಿರುಳುಗನ್ನಡವೆ ಸೂಕ್ತವಾಗಿತ್ತು ಎಂದು ಹೇಳಿದ್ದಾನೆ. ಮುಂಬರುವ ನಯಸೇನ ಮತ್ತು ಚಂದ್ರರಾಜರು (೧೨ನೇ ಶತಮಾನ) ತಮ್ಮ ಕಾವ್ಯಗಳ ಭಾಷೆ ಪೊಸಗನ್ನಡವೆಂದು ಹೇಳಿದರೆ ಆಂಡಯ್ಯನು (೧೩ನೆಯ ಶತಮಾನ) ತನ್ನ ಕಾವ್ಯದ ಭಾಷೆಯನ್ನು ಅಚ್ಚಗನ್ನಡವೆಂದು ಕರೆದಿದ್ದಾನೆ. ಹೀಗೆ ಕ್ರಿ.ಶ ೯ ರಿಂದಕ್ರಿ.ಶ ೧೩ ರ ವರೆಗಿನ ನಾಲ್ಕು ಶತಮಾನಗಳ ಅವಧಿಯಲ್ಲಿ ಹಳೆಗನ್ನಡ, ತಿರುಳುಗನ್ನಡ, ಹೊಸಗನ್ನಡ ಮತ್ತು ಅಚ್ಚಗನ್ನಡ ಎಂಬ ನಾಲ್ಕು ಅವಸ್ಥಾಬೇಧಗಳ ಮಾತುಗಳು ಬಂದು ಹೋಗಿವೆ.

Downloads

Published

05.11.2023

How to Cite

I. B. SATIHAL. (2023). ಧ್ವನಿ ಬದಲಾವಣೆ ಮತ್ತು ಆರ್ಥಿಕ ತತ್ವ.: (ಉತ್ತರ ಕರ್ನಾಟಕ ಜಿಲ್ಲೆಗಳನ್ನು ಅನುಲಕ್ಷಿಸಿ). AKSHARASURYA, 2(12), 58 to 63. Retrieved from http://aksharasurya.com/index.php/latest/article/view/263

Issue

Section

ಸಂಶೋಧನಾ ಲೇಖನಗಳು. | RESEARCH ARTICLE.