ನವ್ಯ ಕಾದಂಬರಿಗಳಲ್ಲಿ ಜಾತಿ ಸಮಸ್ಯೆ.
Keywords:
ಜಾತಿ, ನವ್ಯ, ಕಾದಂಬರಿ, ಕನ್ನಡ ಸಾಹಿತ್ಯ, ಸಂಬಂಧAbstract
ನವ್ಯ ಕಾದಂಬರಿಗಳಲ್ಲಿ ಜಾತಿ ಸಮಸ್ಯೆ ಭಾರತದಲ್ಲಿನ ಜಾತಿ ಪದ್ಧತಿಯು ಸಾಮಾಜಿಕ ಶ್ರೇಣಿಕರಣವನ್ನು ವಿವರಿಸುತ್ತದೆ. ಅದಲ್ಲದೆ ಸಾಮಾಜಿಕ ನಿರ್ಬಂಧಗಳ ಅಡಿಯಲ್ಲಿ ಅನೇಕ ಪಂಗಡಗಳು ಆಳವಾಗಿ ಬೇರೂರಿರುವುದು ವಿಪರ್ಯಾಸವೇ ಸರಿ. ಜಾತಿಯಲ್ಲಿಯೇ ಅನ್ಯ ಗುಂಪುಗಳ ಅಸ್ತಿತ್ವ ಇದೆ ಇದನ್ನು ಗೋತ್ರಗಳು ವಂಶವಾಹಿನಿ ಅಥವಾ ಕುಟುಂಬದ ಕುಲ ಗೋತ್ರವನ್ನು ವೈಯಕ್ತಿಕ ನೆಲೆಯಲ್ಲಿ ಗುರುತಿಸಲಾಗುತ್ತದೆ. ಹಲವಾರು ಉಪಜಾತಿಗಳಲ್ಲಿ ಶಾಕಾದ್ವೀಪ ಕೂಡಾ ಒಂದು. ಹಿಂದುತ್ವದೊಂದಿಗೆ ಗುರುತಿಸಿಕೊಂಡಿರುವ ಇತರ ಮುಸ್ಲಿಂರ ಕೆಲವು ಗುಂಪುಗಳು ಮತ್ತು ಕ್ರಿಶ್ಚಿಯನ್ನರು ಇದೇ ತೆರನಾದ ಗುಂಪು ಪ್ರಭೇದ ಹೊಂದಿರುವುದು ಭಾರತದ ಉಪ ಪಂಗಡಗಳಲ್ಲಿ ಕಾಣುತ್ತೇವೆ. ನಗರಗಳಲ್ಲಿ ಜಾತಿ ನಿರ್ಬಂಧ ಅಷ್ಟಾಗಿ ಕಂಡು ಬರದಿದ್ದರೂ ಹಳ್ಳಿಗಳಲ್ಲಿ ಈ ಜಾತಿ ಇನ್ನೂ ಆಚರಣೆಯಲ್ಲಿ ಇರುವುದನ್ನು ಗುರುತಿಸಬಹುದಾಗಿದೆ. ಅದರಂತೆಯೇ ಸಾಹಿತ್ಯ ಕ್ಷೇತ್ರದಲ್ಲಿಯೂ ‘ಜಾತಿ’ ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ರಚನೆಯಾದಂತಹ ಸಾಹಿತ್ಯ ಪಂಥಗಳು ಹಲವಾರು ಅದರಲ್ಲಿಯೂ ನವ್ಯ ಸಾಹಿತ್ಯದಲ್ಲಿ ಕಂಡು ಬರುವಂತಹ ಜಾತಿ ಸಮಸ್ಯೆಯನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ.