ಕನ್ನಡ ಮಹಿಳಾ ನಾಟಕಗಳಲ್ಲಿ ಸಾಮಾಜಿಕ ಪುನರ್‌ಮೌಲ್ಯೀಕರಣದ ನೆಲೆ-ನಿಲುವು.
Keywords:
ಜಾತಿವ್ಯವಸ್ಥೆ, ಲಿಂಗತಾರತಮ್ಯ, ಬುದ್ಧತ್ವ, ಆಮ್ರಪಾಲಿ, ಕನಕದಾಸರು, ದಲಿತಲೋಕ, ಕೊಳಗೇರಿ, ಧರ್ಮಕಾವ್ಯAbstract
ಪ್ರಾಚೀನಕಾಲದಿಂದಲೂ ಈ ಹೊತ್ತಿನ ವರೆಗೂ ಸ್ತ್ರೀಯರು ಸಾಮಾಜಿಕವಾಗಿ ಶೋಷಣೆ, ಅವಮಾನಗಳನ್ನು ಅನುಭವಿಸುತ್ತಲೇ ಬಂದಿದ್ದಾರೆ. ಸಾಮಾಜಿಕ ಸಮಾನತೆಯನ್ನು ಗಳಿಸುವ ಹೋರಾಟದಲ್ಲಿ ಇಂದಿನ ಸ್ತ್ರೀಯ ಸ್ಥಾನವನ್ನು ಗುರುತಿಸುವುದು ತುಂಬಾ ಅವಶ್ಯಕವಾದದ್ದು. ಸ್ತ್ರೀಯು ಭಾರತದ ಸಂದರ್ಭದಲ್ಲಿ ತನ್ನ ಬದುಕಿನ ಸ್ವಾತಂತ್ರ್ಯಕ್ಕಾಗಿ ಕಾಲಕಾಲಕ್ಕೆ ಸಾಮಾಜಿಕವಾಗಿ ನೆರವಾದ ದಾರ್ಶನಿಕ ದಾರಿಗಳು ಹಾಗೂ ಕ್ರಾಂತಿಕಾರಿಣಿಯಾಗಿ ತಾನೇ ಕಂಡುಕೊಂಡ ಪ್ರತಿರೋಧ ಮಾರ್ಗಗಳು ಹಲವಾರಿವೆ. ಆಧುನಿಕ ಕನ್ನಡ ನಾಟಕಕಾರ್ತಿಯರು ತಮ್ಮ ನಾಟಕಗಳಲ್ಲಿ ಇಂತಹ ಮಾರ್ಗಗಳನ್ನು ಹೇಗೆ ಪುನರ್‌ಮೌಲ್ಯೀಕರಿಸಿದ್ದಾರೆ ಎಂಬುದನ್ನು ಇಲ್ಲಿ ಆಯ್ದ ನಾಟಕಗಳ ಅನುಸಂಧಾನದ ಮೂಲಕ ಅರಿತುಕೊಳ್ಳಲು ಪ್ರಯತ್ನಿಸಲಾಗಿದೆ.