ಸಂಶೋಧನೆಯ ಆಕರವಾಗಿ ಕೀರ್ತನಸಾಹಿತ್ಯ.
Keywords:
ಹರಿದಾಸರ ಅನುಭವದ ನುಡಿ, ಆಡುಭಾಷೆಯಲ್ಲಿ ಕೀರ್ತನೆ, ಸಂಶೋಧನೆAbstract
ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಪ್ರಮುಖವಾಗಿ ಎರಡು ಸಾಹಿತ್ಯದ ಪ್ರಕಾರಗಳನ್ನು ಕಾಣುತ್ತೇವೆ. ಅವುಗಳೆಂದರೆ ಒಂದು ಶಿವಶರಣರಿಂದ ರಚಿತವಾದ ವಚನಸಾಹಿತ್ಯ, ಇನ್ನೊಂದು ಹರಿದಾಸರ ಅನುಭವದ ನುಡಿಗಳಿಂದ ರಚಿತವಾದ ಕೀರ್ತನಸಾಹಿತ್ಯ. ವಚನಕಾರರು ಅಂದಿನ ಕಾಲದ ಸಾಮಾಜಿಕ ಪರಿಸ್ಥಿತಿಯ ಕುರಿತು ರಾಜಪ್ರಭುತ್ವವನ್ನು ವಿರೋಧಿಸಿತ್ತಾ ಒಂದು ಆಯಾಮವನ್ನು ಕಂಡುಕೊಂಡರೆ, ಕೀರ್ತನಸಾಹಿತ್ಯವು ತಾಳ-ತಂಬೂರಿಯನ್ನು ಮೀಟುತ್ತಾ, ಊರೂರು ತಿರುಗುತ್ತಾ ಜನಭಾಷೆಯಾದ ಆಡುಭಾಷೆಯಲ್ಲಿ ಕೀರ್ತನೆಗಳನ್ನು ಹಾಡುವ ಹರಿದಾಸರ ಮೂಲಕ ಜನಸಮೂಹಕ್ಕೆ ಹತ್ತಿರವಾದ ಸಾಹಿತ್ಯದ ಪ್ರಕಾರವಾಗಿದೆ. ಹರಿದಾಸರು ಹಾಡಲೆಂದೇ ಕೀರ್ತನೆಗಳನ್ನು ರಚಿಸಲಿಲ್ಲ. ರಚಿಸಿದ ಕೀರ್ತನೆಗಳನ್ನು ರಾಗ-ತಾಳಯುಕ್ತವಾಗಿ ಹಾಡಿ ಜನಸಮೂಹಕ್ಕೆ ಹತ್ತಿರವಾದವರು. ಆ ಮೂಲಕ ಮತ ಪ್ರಸಾರದ ದೃಷ್ಟಿಯಿಂದ ರಚಿತವಾದ ಹರಿದಾಸರ ಕೀರ್ತನೆಗಳು ಮತಪ್ರಸಾರದ ಜೊತೆಗೆ ಸಾಮಾನ್ಯ ಜನರ ಅದೆಷ್ಟೋ ವಿಚಾರಗಳನ್ನು ತಿಳಿಸಿ, ಅಂದಿನ ಕಾಲದ ರಾಜಕೀಯ, ಸಾಮಾಜಿಕ, ಧಾರ್ಮಿಕ ಪರಿಸ್ಥಿತಿಗಳನ್ನು ತಿಳಿಸುವ ಕೀರ್ತನೆಗಳನ್ನು ರಚಿಸಿದ್ದಾರೆ. ಆ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ಸರಿಮಾಡುವಲ್ಲಿ ಹರಿದಾಸರ ಕೊಡುಗೆ ಮಹತ್ವದ್ದೆನಿಸಿದೆ. ಇಂತಹ ಹರಿದಾಸರಿಂದ ರಚಿತವಾದ ಕೀರ್ತನಸಾಹಿತ್ಯವು ಇಂದಿನ ಸಂಶೋಧನೆಗಳಿಗೆ ಒಂದು ಆಕರವಾಗಿ ದೊರೆಯುವ ಹಲವು ಸಂದರ್ಭ, ವಿಷಯ, ವಿಚಾರಗಳನ್ನು ಈ ಲೇಖನದಲ್ಲಿ ತಿಳಿಸುವ ಪ್ರಯತ್ನವನ್ನು ಮಾಡಿದ್ದೇನೆ.