ಸಿದ್ಧಲಿಂಗಯ್ಯನವರ ಬರಹಗಳು: ಜೀವನ್ಮುಖಿ ಜಗತ್ತಿನ ಅನಾವರಣ.
Keywords:
ಸಿದ್ಧಲಿಂಗಯ್ಯ, ಸಾಂಸ್ಕೃತಿಕ ಮಹತ್ವ, ರಾಜಕೀಯ, ದಲಿತAbstract
ಸಿದ್ಧಲಿಂಗಯ್ಯನವರು ಕನ್ನಡ ಕಾವ್ಯ ಜಗತ್ತು ಕಂಡ ಅಪ್ರತಿಮ ಪ್ರತಿಭಾನ್ವಿತ ಕವಿಗಳಲ್ಲಿ ಒಬ್ಬರು. ಅವರ ಬದುಕು ಮತ್ತು ಬರಹ ಮಾನವ ಪ್ರೇಮದ ಜೀವಂತಿಕೆಯನ್ನು ಜಗತ್ತಿಗೆ ಸಾರುವ ಮಹತ್ವಾಕಾಂಕ್ಷೆಯಿಂದ ರೂಪುಗೊಂಡವುಗಳಾಗಿವೆ. ಹಾಗಾಗಿ ಅವರ ಬರಹಗಳ ಜೀವಾಳವನ್ನು ಮೂರು ಆಯಾಮಗಳಲ್ಲಿ ಗುರುತಿಸುವುದು ಈ ಲೇಖನದ ಉದ್ದೇಶವಾಗಿದೆ. ಮೊದಲನೆಯದು ಬಹುಸಂಖ್ಯಾತ ಸಾಮಾಜಿಕ ವ್ಯವಸ್ಥೆ ಸಿದ್ಧಲಿಂಗಯ್ಯನವರ ಬದುಕು ಬರಹಗಳನ್ನು ನೋಡಿರುವ ಕ್ರಮ, ಮತ್ತು ಅದನ್ನು ನೋಡಬೇಕಾದ ವಿಧಾನ ಯಾವುದು ಎಂಬುದನ್ನು ಗುರುತಿಸುವುದು. ಎರಡನೆಯದಾಗಿ ಸಿದ್ಧಲಿಂಗಯ್ಯ, ದಲಿತ ಬದುಕು, ದಲಿತಾನುಭವಗಳು ಇವುಗಳ ನಡುವಿನ ಅಂತರ್ ಸಂಬಂಧಗಳನ್ನು ಗುರುತಿಸುವುದು. ಮೂರನೆಯದಾಗಿ ಸಿದ್ಧಲಿಂಗಯ್ಯನವರ ಬರವಣಿಗೆಯಲ್ಲಿ ವ್ಯಕ್ತವಾಗುವ ಮಾನವ ಪ್ರೇಮದ ಮಾದರಿಗಳಾವುವು ಎಂಬುದನ್ನು ಗುರುತಿಸುವುದು.