ಭಾಷೆಯಲ್ಲಿ ಮಹಿಳಾ ಪ್ರತಿನಿಧೀಕರಣ.
Keywords:
ಮಹಿಳೆ, ಭಾಷೆ, ಅಸ್ತಿತ್ವ, ಪುರುಷ, ಅಭಿವ್ಯಕ್ತಿAbstract
ನಮ್ಮ ಇಡೀ ವ್ಯವಸ್ಥೆ ಪುರುಷ ಕೇಂದ್ರಿತ ನೆಲೆಯಲ್ಲಿ ರೂಪಿತವಾಗಿದೆ. ಜೀವನದ ಪ್ರತಿಯೊಂದು ಭಾಗವೂ ಶತಶತಮಾನಗಳಿಂದಲೂ ಅದೇ ನೆಲೆಗಟ್ಟಿನಲ್ಲಿ ಮುಂದುವರೆದಿವೆ. ಭಾಷೆಯೂ ಇದಕ್ಕೆ ಹೊರತಾಗಿಲ್ಲ. ಏನನ್ನೇ ಹೇಳಬೇಕಾದರೂ ಪುರುಷ ಕೇಂದ್ರಿತ ಭಾಷೆ ಅಥವಾ ಪುರುಷವಾಚಿ ಭಾಷೆ ಇಂದಿಗೂ ಅತಿ ಸರಾಗವಾಗಿ ಬಳಕೆಯಾಗುತ್ತದೆ. ಹೆಣ್ಣಿಗೆ ಅವಳದೇ ಆದ ಅಭಿವ್ಯಕ್ತಿ, ಭಾಷೆ ಇದೆ ಎಂಬುದನ್ನು ಇಂದಿಗೂ ಸಮಾಜ ಒಪ್ಪಿಕೊಂಡಿಲ್ಲ. ನಮ್ಮ ಲೇಖಕಿಯರು ಸಾಹಿತ್ಯ ರಚನೆಗೆಂದು ನಿಂತ ಆರಂಭದ ದಿನಗಳಲ್ಲಿ ಅನೇಕ ಸವಾಲುಗಳನ್ನು, ಅಪಮಾನಗಳನ್ನು ಎದುರಿಸಬೇಕಾಗಿತ್ತು. ಹೆಣ್ಣಿಗೆ ಪ್ರಬುದ್ಧತೆಯೇ ಇಲ್ಲ ಎಂದು ವ್ಯವಸ್ಥೆ ಒಪ್ಪಿಕೊಂಡುಬಿಟ್ಟಿತ್ತು. ಇಂದಾದರೂ ಅಷ್ಟೆ ಭಾಷೆಯ ಅಭಿವ್ಯಕ್ತಿಯಲ್ಲಿ ಮಹಿಳಾ ಭಾಷೆ, ಹೆಣ್ಣು ಭಾಷೆ ಎಂಬುದು ತನ್ನ ಅಸ್ತಿತ್ವಕ್ಕಾಗಿ ಪ್ರಶ್ನೆಗಳನ್ನು ಹಾಕುತ್ತಲೇ ಇದೆ. ಮಾಧ್ಯಮಗಳಲ್ಲೂ ಮಹಿಳಾ ಅಭಿವ್ಯಕ್ತಿ ಪೂರ್ಣಪ್ರಮಾಣದಲ್ಲಿ ಸಾಧಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಚರ್ಚೆಗಳು ನಡೆಯಬೇಕಿದ್ದು, ಅದರತ್ತ ಅನೇಕರು ಗಮನಹರಿಸಿದ್ದಾರೆ.