ಕೆ. ಎಸ್. ನಿಸಾರ್ ಅಹಮದ್‌ರವರ ‘ಶಿಲುಬೆ ಏರಿದ್ದಾನೆ’ ಕವನದಲ್ಲಿನ ಸಮಕಾಲೀನ ತಲ್ಲಣಗಳು.

Authors

  • MAHESH B. D.

Keywords:

ಶಿಲುಬೆ, ಮಕುಟ, ಕೊಂಬು, ಗುಜರಿ, ರೈಫಲ್ಲು, ಟ್ಯಾಂಕು, ಆಜ್ಯ, ಮುಯ್ಯಿ, ಇಗರ್ಜಿ, ಸೋಗೆಬಿಲ

Abstract

ಜಗತ್ತಿಗೇ ಪ್ರೀತಿ, ದಯೆ, ಕರುಣೆಯ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಜೀಸಸ್ ಪ್ರಮುಖರು. ಸಾವಿನ ಸಂಕಟದಲ್ಲೂ ವಿಚಲಿತನಾಗದೆ ಲೋಕಕಲ್ಯಾಣಕ್ಕಾಗಿ ಮಿಡಿದ ಜೀಸಸ್‌ನ ವ್ಯಕ್ತಿತ್ವ ಇಂದು ಪ್ರಸ್ತುತ. ಹಿಂಸೆ ಆಧುನಿಕ ಸಮಾಜದ ಗುಣವೆಂಬಂತೆ ವಿಶ್ವವ್ಯಾಪಿಯಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಜೀಸಸ್‌ನ ಪ್ರೀತಿ, ಕರುಣೆ, ಔದಾರ್ಯ ನಮ್ಮೊಳಗೆ ಅನುರಣನಗೊಳ್ಳಬೇಕಾದ ಅಗತ್ಯವಿದೆ. ನಿಸಾರ್ ಅವರು ಜೀಸಸ್‌ನ ವ್ಯಕ್ತಿತ್ವದ ಬಗ್ಗೆ ಬರೆದಿರುವ ಈ ಕವಿತೆ ಪರಧರ್ಮ ಸಹಿಷ್ಣುತೆ ಹಾಗೂ ವಿಶ್ವಭ್ರಾತೃತ್ವಕ್ಕೆ ಬರೆದ ಹೊಸ ಭಾಷ್ಯದಂತಿದೆ.

‘ಶಿಲುಬೆ ಏರಿದ್ದಾನೆ’ ಕವನ ಜೀಸಸ್ ಬಗ್ಗೆ ಗೋವಿಂದ ಪೈಯವರ ‘ಗೊಲ್ಗೊಥಾ’ ಕವನದ ನಂತರ ಬಂದ ವಿಶಿಷ್ಟ ಕವನ. ಜೀಸಸ್‌ನ ವ್ಯಕ್ತಿತ್ವ, ಆದರ್ಶಗಳನ್ನು ಅಪೂರ್ವವಾಗಿ ಚಿತ್ರಿಸಿರುವ ಕವಿ ಆ ಕಾಲದ ಹಿಂಸೆ, ಕ್ರೌರ್ಯ, ಈ ಕಾಲದಲ್ಲಿಯೂ ಹೊಸರೂಪದಲ್ಲಿ ಮುಂದುವರೆಯುತ್ತಿರುವ ದುರಂತವನ್ನು ಕಟ್ಟಿಕೊಟ್ಟಿದ್ದಾರೆ. ಜೀಸಸ್‌ನ ಸಾವನ್ನು ವಿಷಾದದಿಂದ ನೋಡುವ ಕವಿ, ಆತ ಇಂದು ಅಸಂಖ್ಯ ಹೃದಯಗಳಲ್ಲಿ ಮಾನವತೆಯ ಕಿಡಿಯನ್ನು ಹಚ್ಚಿಹೋಗುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕೆ. ಎಸ್. ನಿಸಾರ್ ಅಹಮದ್‌ರವರದು ವಿಭಿನ್ನ ಸಂಸ್ಕೃತಿಯ ಅರಿವು, ವೈಚಾರಿಕ ದೃಷ್ಠಿಕೋನ, ಲವಲವಿಕೆಯ ಭಾಷೆ, ಅನುಭವವನ್ನು ಹದವರಿತ ವ್ಯಂಗ್ಯ, ಕಟೋಕ್ತಿಗಳ ಮೂಲಕ ಹೇಳುವ ಜಾಣ್ಮೆ ನಿಸಾರರ ಕಾವ್ಯದ ಮುಖ್ಯ ಲಕ್ಷಣಗಳಾಗಿವೆ.

Downloads

Published

05.10.2023

How to Cite

MAHESH B. D. (2023). ಕೆ. ಎಸ್. ನಿಸಾರ್ ಅಹಮದ್‌ರವರ ‘ಶಿಲುಬೆ ಏರಿದ್ದಾನೆ’ ಕವನದಲ್ಲಿನ ಸಮಕಾಲೀನ ತಲ್ಲಣಗಳು. AKSHARASURYA, 2(11), 40–45. Retrieved from http://aksharasurya.com/index.php/latest/article/view/248

Issue

Section

ಸಂಶೋಧನಾ ಲೇಖನಗಳು. | RESEARCH ARTICLE.